ಅಂಬಾನ್ ಸಿಟಿ: ಇಂಡೊನೇಷ್ಯಾ ದ್ವೀಪ ರಾಷ್ಟ್ರದ ಪೂರ್ವ ಭಾಗದಲ್ಲಿರುವ ಮಾಲುಕು ದ್ವೀಪದಲ್ಲಿ ಗುರುವಾರ ಸಂಭವಿಸಿದ ಭೂಕಂಪನಕ್ಕೆ20ಕ್ಕೂ ಹೆಚ್ಚುಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಸ್ಥಳೀಯ ಕಾಲಮಾನ ಬೆಳಿಗ್ಗೆ 8.45ಕ್ಕೆಭೂಕಂಪನ ಸಂಭವಿಸಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.5ರಷ್ಟು ಇತ್ತು. ಕಂಪನ ಕೇಂದ್ರ ಅಂಬಾನ್ ಸಿಟಿಯಿಂದ 37 ಕಿ.ಮೀ ದೂರದಲ್ಲಿದೆ ಎಂದು ಅಮೆರಿಕದ ಭೂ ಸರ್ವೇಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ.

4 ಲಕ್ಷ ನಿವಾಸಿಗಳಿರುವ ‘ಅಂಬಾನ್ ಸಿಟಿ’ ನಗರಕ್ಕೆ ತೀವ್ರ ಹಾನಿ ಆಗಿದ್ದು,ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿದೆ. ನಿರಾಶ್ರಿತರಿಗೆ ‘ಶೆಡ್’ಗಳನ್ನು ನಿರ್ಮಿಸಲಾಗಿದೆಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಕಂಪನದಿಂದ ದ್ವೀಪದ ಎತ್ತರ ಪ್ರದೇಶಗಳು ಸಡಿಲಗೊಂಡಿದ್ದು, ಸರಣಿ ಭೂಕುಸಿತ ಸಂಭವಿಸುತ್ತಿವೆ. ಬೈಕ್ ಚಲಾಯಿಸುತ್ತಿದ್ಧಾಗ ಭೂಕುಸಿತ ಸಂಭವಿಸಿ ಮಹಿಳೆ ಮೃತಪಟ್ಟಿದ್ದಾರೆ.

ಇಸ್ತಾಂಬುಲ್: ನಡುಗಿದ ಭೂಮಿ

ಇಸ್ತಾಂಬುಲ್: ಟರ್ಕಿಯ ಅತಿ ದೊಡ್ಡ ನಗರ ಇಸ್ತಾಂಬುಲ್‌ನಲ್ಲಿ ಗುರುವಾರ ಭೂಮಿ ಕಂಪಿಸಿದ್ದು,ಸಾವು- ನೋವು ವರದಿಯಾಗಿಲ್ಲ. ಭೂಕಂಪನ ಕೇಂದ್ರ ಬಿಂದು ಸಿಲಿವ್ರಿ ಪಟ್ಟಣದಲ್ಲಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.7ರಷ್ಟು ದಾಖಲಾಗಿತ್ತು ಇತ್ತು ಎಂದು ಬೊಗಾಜಿಸಿವಿಶ್ವವಿದ್ಯಾಲಯದ ಕಂಪನ ಸಂಶೋಧನಾ ವಿಭಾಗ ಮಾಹಿತಿ ನೀಡಿದೆ.

ಪಾಕಿಸ್ತಾನ: ಮತ್ತೆ ಭೂಕಂಪನ

ಮೀರ್‌ಪುರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಗುರುವಾರ ಭೂಕಂಪ ಮರುಕಳಿಸಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.7ರಷ್ಟು ದಾಖಲಾಗಿದೆ. ನಗರದಿಂದ 4 ಕಿ.ಮೀ ದೂರದಲ್ಲಿ ಭೂಕಂಪನ ಕೇಂದ್ರ ಇತ್ತು. ಯಾವುದೇ ಸಾವು ನೋವು ಸಂಭವಿಸಿರುವ ವರದಿ ಆಗಿಲ್ಲ.

ಇದೇ ಮಂಗಳವಾರ ಸಂಭವಿಸಿದ ಭೂಕಂಪನಕ್ಕೆ 38 ಮಂದಿ ಬಲಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.