ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್‌ನಲ್ಲಿ ಗ್ರೇಟಾ ತಂಬರ್ಗ್‌ ಆಂದೋಲನ

Last Updated 22 ಫೆಬ್ರುವರಿ 2019, 20:08 IST
ಅಕ್ಷರ ಗಾತ್ರ

ಪ್ಯಾರಿಸ್‌: ಸ್ವೀಡನ್‌ ಮೂಲದ ಪರಿಸರ ಹೋರಾಟಗಾರ್ತಿ ಗ್ರೇಟಾ ತಂಬರ್ಗ್‌ (16) ತರಗತಿ ಬಹಿಷ್ಕಾರ ಆಂದೋಲವನ್ನು ಶುಕ್ರವಾರ ಪ್ಯಾರಿಸ್‌ನಲ್ಲಿ ನಡೆಸುವ ಮೂಲಕ ಗಮನ ಸೆಳೆದಿದ್ದಾಳೆ.

ಇಲ್ಲಿಯ ವಿದ್ಯಾರ್ಥಿಗಳು ಜಾಗತಿಕತಾಪಮಾನ ಏರಿಕೆಯ ವಿರುದ್ಧ ಬೀದಿಗಳಿದು ಹೋರಾಟ ನಡೆಸಲು ಜಾಗೃತಿ ಮೂಡಿಸುವ ಪ್ರಯತ್ನ ಆರಂಭಿಸಿದ್ದಾಳೆ.

ಈ ಆಂದೋಲನದ ಭಾಗವಾಗಿ ಪತ್ರಿಕಾಗೋಷ್ಠಿ ನಡೆಸಿದಳು. ನಂತರ ಹವಾಮಾನ ಬದಲಾವಣೆ ಕುರಿತು ಅರಿವು ಮೂಡಿಸುವ ಮೆರವಣಿಗೆಯಲ್ಲಿ ಭಾಗವಹಿಸಿದಳು.

ಕಳೆದ ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ತಂಬರ್ಗ್‌ ಮಾಡಿದ ಭಾಷಣಕ್ಕೆ ರಾಜಕೀಯ ನಾಯಕರು ಮತ್ತು ಪರಿಸರ ಹೋರಾಟಗಾರರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸಿಡ್ನಿ, ಬ್ರುಸೆಲ್‌, ಬರ್ಲಿನ್‌, ಲಂಡನ್ನಿನ ಹಲವು ನಗರಗಳ ವಿದ್ಯಾರ್ಥಿಗಳು ಈಕೆಯಿಂದ ಪ್ರೇರಣೆ ಪಡೆದು ಜಾಗತಿಕ ತಾಪಮಾನದ ವಿರುದ್ಧ ಹೋರಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT