ಗ್ರಾಜ್/ಆಸ್ಟ್ರಿಯಾ: ಇಲ್ಲಿನ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆಸಿ, 10 ಮಂದಿಯ ಸಾವಿಗೆ ಕಾರಣನಾಗಿ, ಕೊನೆಯಲ್ಲಿ ಸ್ವತಃ ಗುಂಡು ಹಾರಿಸಿಕೊಂಡು ಮೃತಪಟ್ಟ ವಿದ್ಯಾರ್ಥಿಯ ಮನೆಯಲ್ಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ‘ವಿದಾಯ ಪತ್ರ’ವೊಂದು ಲಭಿಸಿದೆ.

ಗುಂಡಿನ ದಾಳಿ ನಡೆಸಿದ ಯುವಕ ಇದೇ ಶಾಲೆಯ ಮಾಜಿ ವಿದ್ಯಾರ್ಥಿ. ಈತ ಯಾಕೆ ಈ ಕೃತ್ಯ ನಡೆಸಿದ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ವಿದಾಯ ಪತ್ರದ ಜತೆಗೆ ಈತನ ಮನೆಯಲ್ಲಿ ನಿಷ್ಕ್ರಿಯ ಪೈಪ್ ಬಾಂಬ್ ಕೂಡ ಸಿಕ್ಕಿದೆ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಮೌನಾಚರಣೆ: ಆಸ್ಟ್ರಿಯಾದ ಗ್ರಾಜ್ ನಗರದ ಶಾಲೆಯಲ್ಲಿ 21 ವರ್ಷದ, ಮಾಜಿ ವಿದ್ಯಾರ್ಥಿ ನಡೆಸಿದ ಗುಂಡಿನ ದಾಳಿಯಲ್ಲಿ 10 ಮಂದಿ ಮೃತಪಟ್ಟು, 12 ಮಂದಿ ಗಾಯಗೊಂಡಿದ್ದರು. ಘಟನೆ ಖಂಡಿಸಿ ಬುಧವಾರ ಆಸ್ಟ್ರಿಯಾದಲ್ಲಿ ಒಂದು ನಿಮಿಷ ರಾಷ್ಟ್ರೀಯ ಮೌನಾಚರಣೆ ನಡೆಸಲಾಯಿತು. ದುರಂತದಲ್ಲಿ ಮಡಿದವರನ್ನು ನೆನೆದು ಇಡೀ ದೇಶವೇ ಕಂಬನಿ ಮಿಡಿಯಿತು.

ಗ್ರಾಜ್ ನಗರದಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಜನರು ಇಲ್ಲಿನ ಸಿಟಿ ಹಾಲ್ ಎದುರು ಮೋಂಬತ್ತಿ ಬೆಳಗಿ, ಹೂಗುಚ್ಛ ಇರಿಸಿ ನಿಧನರಾದವರಿಗೆ ಪ್ರಾರ್ಥಿಸಿದರು. ಆಸ್ಟ್ರಿಯಾದ ರಾಜಧಾನಿ ವಿಯನ್ನಾದಲ್ಲೂ ಬಸ್, ರೈಲು ಸೇರಿದಂತೆ ಸಾರ್ವಜನಿಕ ಸಾರಿಗೆಯನ್ನು ಒಂದು ನಿಮಿಷ ಸ್ಥಗಿತಗೊಳಿಸಿ ಮೌನಾಚರಣೆ ನಡೆಸಲಾಯಿತು. ಆಸ್ಟ್ರಿಯಾದಲ್ಲಿ ಮೂರು ದಿನ ಶೋಕಾಚರಣೆ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.