ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾದ ತೇಲುವ ಬಂದರಿಗೆ ಇದೇ ಮೊದಲಿಗೆ ಮಾನವೀಯ ನೆರವಿನ ಸರಕು ರವಾನೆ

Published 9 ಮೇ 2024, 15:43 IST
Last Updated 9 ಮೇ 2024, 15:43 IST
ಅಕ್ಷರ ಗಾತ್ರ

ನಿಕೋಷಿಯಾ(ಸೈಪ್ರಸ್‌): ಗಾಜಾ ಕಡಲ ತೀರದಲ್ಲಿ ಇತ್ತೀಚೆಗಷ್ಟೇ ಅಮೆರಿಕ ನಿರ್ಮಾಣ ಮಾಡಿರುವ ತೇಲುವ ಬಂದರಿಗೆ ಇದೇ ಮೊದಲ ಬಾರಿಗೆ ಮಾನವೀಯ ನೆರವಿನ ಸರಕು ರವಾನೆ ಮಾಡಲಾಗುತ್ತಿದೆ.

ಯೂರೋಪ್‌ನ ಪುಟ್ಟ ದ್ವೀಪ ರಾಷ್ಟ್ರ ಸೈಪ್ರಸ್‌ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ತನ್ನ ಲಾರ್ಕಾನಾ ಬಂದರಿನಿಂದ ಮಾನವೀಯ ನೆರವಿನ ಸರಕುಗಳುಳ್ಳ ಹಡಗನ್ನು ಕಳುಹಿಸಿಕೊಟ್ಟಿದೆ. ಅದು ಶೀಘ್ರದಲ್ಲಿಯೇ ಗಾಜಾವನ್ನು ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

ವಿದೇಶಗಳಿಂದ ಬರುವ ಮಾನವೀಯ ನೆರವಿನ ಸರಕುಗಳನ್ನು ಸ್ವೀಕರಿಸಲು ಅನುಕೂಲವಾಗುವಂತೆ ಗಾಜಾ ಸಮೀಪದಲ್ಲಿ ವಿಶಾಲವಾದ ತೇಲುವ ಬಂದರು ನಿರ್ಮಿಸುವಂತೆ ಎರಡು ತಿಂಗಳ ಹಿಂದೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಆದೇಶಿಸಿದ್ದ ಬಳಿಕ ಈ ಬೆಳವಣಿಗೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT