ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ : ಸಿಖ್ ಸುದ್ದಿ ವಾಚಕ

ಹರ್ಮೀತ್ ಸಿಂಗ್‌ಗೆ ಅವಕಾಶ
Last Updated 30 ಜೂನ್ 2018, 18:27 IST
ಅಕ್ಷರ ಗಾತ್ರ

ಕರಾಚಿ(ಪಿಟಿಐ): ಸಿಖ್‌ ಸಮುದಾಯದ ವ್ಯಕ್ತಿಯೊಬ್ಬರು ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಸುದ್ದಿ ವಾಚಕರ ಹುದ್ದೆಗೆ ನೇಮಕವಾಗಿದ್ದಾರೆ. ಖೈಬರ್ ಪ್ರಾಂತ್ಯದ ಚಾಕೇಸರ್‌ನ ಹರ್ಮೀತ್ ಸಿಂಗ್ ಇಲ್ಲಿನ ಪಬ್ಲಿಕ್ ನ್ಯೂಸ್‌ ಚಾನಲ್‌ಗೆ ನೇಮಕವಾಗಿದ್ದಾರೆ.

ಮಾಧ್ಯಮ ಸಂಸ್ಥೆ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ‘ಪಾಕಿಸ್ತಾನದ ಮೊದಲ ಸಿಖ್ನ್ಯೂಸ್ ಆ್ಯಂಕರ್’ ಎಂದು ಬರೆದುಕೊಂಡಿದೆ.

‘ಪಾಕಿಸ್ತಾನದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮಾಧ್ಯಮ ಕ್ಷೇತ್ರದ ಬಗ್ಗೆ ನಾನು ಯಾವಾಗಲೂ ಆಸಕ್ತಿ ಹೊಂದಿದ್ದೆ. ಧರ್ಮದ ಮೂಲಕ ಗುರುತಿಸಿ ಕೊಂಡು ಮಾಧ್ಯಮ ಕ್ಷೇತ್ರದಿಂದ ಯಾವುದೇ ಲಾಭವನ್ನೂ ಪಡೆಯುವುದಿಲ್ಲ. ನನ್ನ ಸತತ ಪರಿಶ್ರಮದ ಫಲವಾಗಿ ಗುರುತಿಸುವ ಹಂತಕ್ಕೆ ಬಂದಿದ್ದೇನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT