ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಅಪಘಾತ ಸ್ಥಳದಲ್ಲಿ ‘ಫ್ಲೈಟ್ ರೆಕಾರ್ಡರ್’ ಪತ್ತೆ

Published 25 ಜನವರಿ 2024, 13:10 IST
Last Updated 25 ಜನವರಿ 2024, 13:10 IST
ಅಕ್ಷರ ಗಾತ್ರ

ಮಾಸ್ಕೊ: ಉಕ್ರೇನ್‌ನ ಗಡಿಯಲ್ಲಿ ಬುಧವಾರ ಅಪಘಾತಕ್ಕೀಡಾಗಿದ್ದ ರಷ್ಯಾ ಸೇನೆಯ ಐಎಲ್‌ 76 ವಿಮಾನದಲ್ಲಿ ಅಳವಡಿಸಿದ್ದ ಫ್ಲೈಟ್ ರೆಕಾರ್ಡರ್‌ (ಅವಘಡಕ್ಕೆ ಕಾರಣ ತಿಳಿಯಲು ನೆರವಾಗುವ ಸಾಧನ) ಪತ್ತೆಯಾಗಿದೆ. ಆ ವಿಮಾನದಲ್ಲಿದ್ದ 74 ಜನರು ಸ್ಥಳದಲ್ಲಿ ಸತ್ತಿದ್ದರು.

ಉಕ್ರೇನ್‌ನ ಸೇನೆಯೇ ಈ ವಿಮಾನವನ್ನು ಹೊಡೆದುರುಳಿಸಿದೆ ಎಂದು ರಷ್ಯಾ ಆರೋಪಿಸಿತ್ತು. ಈ ವಿಮಾನ ಅಪಘಾತವನ್ನು ಕುರಿತು ಅಂತರರಾಷ್ಟ್ರೀಯ ತನಿಖೆ ನಡೆಸಬೇಕು ಎಂದು ಉಕ್ರೇನ್‌ನ ಅಧ್ಯಕ್ಷರು ಒತ್ತಾಯಿಸಿದ್ದರು.  

ಉಕ್ರೇನ್‌ನ ಗಡಿಯಲ್ಲಿ ವಿಮಾನ ಪತನಗೊಂಡಿತ್ತು. ಉಕ್ರೇನ್‌ನ ಕ್ಷಿಪಣಿ ದಾಳಿ ಇದಕ್ಕೆ ಕಾರಣ. ವಿಮಾನದಲ್ಲಿ 65 ಉಕ್ರೇನ್‌ನ ಕೈದಿಗಳಿದ್ದರು ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದರು. ಆದರೆ, ವಿಮಾನದಲ್ಲಿ ಯಾರಿದ್ದರು ಎಂಬ ಮಾಹಿತಿ ಇಲ್ಲ ಎಂದು ಉಕ್ರೇನ್‌ ಪ್ರತಿಕ್ರಿಯಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT