ವಾಷಿಂಗ್ಟನ್: ಜಾಗತಿಕ ವ್ಯವಹಾರಗಳ ಕುರಿತ ವಿಚಾರಗಳನ್ನು ಪ್ರಕಟಿಸುವ ಅಮೆರಿಕ ಮೂಲದ ‘ಫಾರಿನ್ ಪಾಲಿಸಿ‘ ನಿಯತಕಾಲಿಕೆಗೆ ಭಾರತ ಮೂಲದ ರವಿ ಅಗರ್‌ವಾಲ್ ಅವರು ಮುಖ್ಯ ಸಂಪಾದಕರಾಗಿ ನೇಮಕಗೊಂಡಿದ್ದಾರೆ.

ಈ ಹಿಂದೆ ರವಿ ಅಗರ್‌ವಾಲ್ ಅವರು ಇದೇ ನಿಯತಕಾಲಿಕೆಯಲ್ಲಿ ವ್ಯವಸ್ಥಾಪಕ ಸಂಪಾದಕರಾಗಿದ್ದರು. ಈಗ ಅವರಿಗೆ ಬಡ್ತಿ ನೀಡಿ, ಮುಖ್ಯ ಸಂಪಾದಕರನ್ನಾಗಿ ನೇಮಿಸಲಾಗಿದೆ.

‘ರವಿ ಅಗರ್‌ವಾಲ್ ತಮ್ಮಲ್ಲಿರುವ ಜಾಗತಿಕ ಮಟ್ಟದ ಉನ್ನತ ಜ್ಞಾನದೊಂದಿಗೆ ಪತ್ರಿಕೆಯನ್ನು ಉತ್ತಮ ರೀತಿಯಲ್ಲಿ ಹೊರ ತರಲಿದ್ದಾರೆ. ದೂರದೃಷ್ಟಿ ಹೊಂದಿರುವ ಅವರು, ಶ್ರೇಷ್ಠ ಲೇಖನಗಳ ಮೂಲಕ ಜ್ಞಾನವನ್ನು ಹಂಚುವ ಉತ್ಸಾಹ ಹೊಂದಿದ್ದಾರೆ. ಆರು ದಶಕಗಳಿಂದ ಪ್ರಕಟವಾಗುತ್ತಿರುವ ಫಾರಿನ್ ಪಾಲಿಸಿ ಪತ್ರಿಕೆಯನ್ನು ಅವರು ಮುನ್ನಡೆಸಲಿದ್ದಾರೆ' ಎಂದು ನಿಯತಕಾಲಿಕೆಯ ಸಿಇಒ ಆ್ಯನ್ ಮ್ಯಾಕ್‌ಡೇನಿಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2018ರಲ್ಲಿ ಫಾರಿನ್ ಪಾಲಿಸಿ ಪತ್ರಿಕೆಗೆ ಸೇರುವ ಮೊದಲು ರವಿ ಅಗರ್‌ವಾಲ್ ಅವರು ಸಿಎನ್‌ಎನ್‌ನಲ್ಲಿ 11 ವರ್ಷಗಳ ಕಾಲ, ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕ ಖಂಡಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಸಿಎನ್‌ಎನ್ ನವದೆಹಲಿ ಬ್ಯೂರೊ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.