ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲಿಯಲ್ಲಿ ಕಾಡ್ಗಿಚ್ಚು: 120ಕ್ಕೂ ಹೆಚ್ಚು ಮಂದಿ ಸಾವು, ನೂರಾರು ಜನ ಕಣ್ಮರೆ

Published 6 ಫೆಬ್ರುವರಿ 2024, 3:35 IST
Last Updated 6 ಫೆಬ್ರುವರಿ 2024, 3:35 IST
ಅಕ್ಷರ ಗಾತ್ರ

ಸ್ಯಾಂಟಿಯಾಗೊ: ದಕ್ಷಿಣ ಅಮೆರಿಕ ಖಂಡದ ಮಧ್ಯ ಚಿಲಿಯಲ್ಲಿ ಉಲ್ಬಣಿಸಿದ ಭೀಕರ ಕಾಡ್ಗಿಚ್ಚಿನಿಂದಾಗಿ 120ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ನೂರಾರು ಜನ ಕಣ್ಮರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿನಾ ಡೆಲ್ ಮಾರ್ ನಗರದ ಪೂರ್ವ ಅಂಚಿನಲ್ಲಿ ಶುಕ್ರವಾರ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಸೋಮವಾರ ಬೆಳಿಗ್ಗೆ ಬೆಂಕಿಯ ತೀವ್ರತೆ ಕಡಿಮೆಯಾಗಿದೆ. ವಾಲ್ಪಾರೈಸೊ ಪ್ರದೇಶದ ಇತರ ಎರಡು ಪಟ್ಟಣಗಳಾದ ಕ್ವಿಲ್ಪೆ ಮತ್ತು ವಿಲ್ಲಾ ಅಲೆಮಾನಾದಲ್ಲಿ ಅಪಾರ ಹಾನಿಯಾಗಿದ್ದು 3 ಸಾವಿರಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಹೇಳಿದ್ದಾರೆ. 

ಒಣ ಹವೆ, ಗಾಳಿ ಮತ್ತು ಕಡಿಮೆ ಆರ್ದ್ರತೆಯು ಬೆಂಕಿ ವೇಗವಾಗಿ ಹರಡಲು ಕಾರಣವಾಯಿತು ಎಂದು ಬೋರಿಕ್‌ ತಿಳಿಸಿರುವುದಾಗಿ ವರದಿಯಾಗಿದೆ.

ರಾಷ್ಟ್ರೀಯ ವಿಪತ್ತು ತಡೆ ತಂಡದ ತಂಡದ ಪ್ರಕಾರ ಚಿಲಿ ದೇಶದಾದ್ಯಂತ 160ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾಡ್ಗಿಚ್ಚು ಹರಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT