ಜೋಹಾನ್ಸ್‌ಬರ್ಗ್: ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣಾ ಆಯೋಗದ ವಿಚಾರಣೆಯಿಂದ ಹೊರನಡೆದು ನ್ಯಾಯಾಂಗ ನಿಂದನೆ ಮಾಡಿರುವ ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರಿಗೆ ದೇಶದ ಉನ್ನತ ನ್ಯಾಯಾಲಯ 15 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಶಿಕ್ಷೆಯನ್ನು ಅಮಾನತುಗೊಳಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ರಾಜ್ಯ ಮತ್ತು ಪ್ಯಾರಾಸ್ಟಾಟಲ್ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ನಡೆಸಿ ಮತ್ತು ಲಂಚ ಪಡೆದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಚಾರಣಾ ಆಯೋಗವು ಜುಮಾ ಅವರನ್ನು ಎರಡು ವರ್ಷಗಳ ಕಾಲ ಜೈಲಿಗೆ ತಳ್ಳುವಂತೆ ಆದೇಶಿಸಿತ್ತು.

ಆಯೋಗದೊಂದಿಗೆ ಸಹಕರಿಸುವುದಕ್ಕಿಂತ ಜೈಲಿಗೆ ಹೋಗಲು ಸಿದ್ಧವಿರುವುದಾಗಿ ಜುಮಾ ಪದೇ ಪದೇ ಹೇಳಿದ್ದಾರೆ.

ನ್ಯಾಯಮೂರ್ತಿ ಸಿ.ಸಿ. ಖಂಪೆಪೆ ಅವರುಮಂಗಳವಾರ ನೀಡಿದ ತೀರ್ಪಿನಲ್ಲಿ, ಜುಮಾ ಅವರ ಹೇಳಿಕೆಗಳನ್ನು ‘ವಿಲಕ್ಷಣ’ ಮತ್ತು ‘ಅಸಹನೀಯ’ ಎಂದು ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.