ಯುಎಇನ ಸರ್ಕಾರಿ ಸುದ್ದಿ ವಾಹಿನಿ ಡಬ್ಲ್ಯುಎಎಂ ಬುಧವಾರ ಈ ಬಗ್ಗೆ ವರದಿ ಮಾಡಿದೆ. ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಕರ್ತವ್ಯನಿರತ ನಾಲ್ವರು ಯೋಧರು ಮೃತಪಟ್ಟಿರುವುದಾಗಿ ಸೇನೆಯು ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ಅದು ಹೇಳಿದೆ. ಆದರೆ, ಅಪಘಾತದ ಬಗ್ಗೆ ಸೇನೆಯು ತಕ್ಷಣಕ್ಕೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ ಎಂದು ತಿಳಿಸಿದೆ.