ಬರ್ಲಿನ್: ಪೂರ್ವ ಮತ್ತು ಪಶ್ಚಿಮ ಜರ್ಮನಿ ಬೇರ್ಪಡಿಸಲು ಪೂರ್ವ ಜರ್ಮನ್ ಅಧಿಕಾರಿಗಳು ನಿರ್ಮಿಸಿದ್ದ ಬರ್ಲಿನ್ ಗೋಡೆಗೆ 60 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಶುಕ್ರವಾರ ಜರ್ಮನಿಯಲ್ಲಿ ಬರ್ಲಿನ್ ಗೋಡೆಯ ಸ್ಮರಣೆ ಕಾರ್ಯಕ್ರಮ ನಡೆಯಿತು.

ಮೂರು ದಶಕಗಳಲ್ಲಿ ಪಶ್ಚಿಮ ಜರ್ಮನಿಗೆ ಪಲಾಯನ ಮಾಡಲು ಪ್ರಯತ್ನಿಸಿದ ಕನಿಷ್ಠ 140 ಜನರು ಬರ್ಲಿನ್ ಗೋಡೆ ಬಳಿ ಜೀವ ತೆತ್ತಿದ್ದಾರೆ.

1961ರಆಗಸ್ಟ್ 13ರಂದು ನಿರ್ಮಾಣ ಆರಂಭಿಸಿದ ಈ ಗೋಡೆ ಕಮ್ಯುನಿಸ್ಟ್ ಆಡಳಿತಕ್ಕೆ ‘ಅಂತ್ಯದ ಆರಂಭ’ ಎಂದು ಕರೆದಿರುವ ಜರ್ಮನಿಯ ಅಧ್ಯಕ್ಷ ಫ್ರಾಂಕ್ ವಾಲ್ಟರ್ ಸ್ಟೈನ್ಮೀರ್, ದೇಶವನ್ನುಆ ಸಮಯದಲ್ಲಿ ಫ್ಯಾಸಿಸಂನಿಂದ ರಕ್ಷಿಸಲು ಬರ್ಲಿನ್ ಗೋಡೆಯನ್ನು ವಿನ್ಯಾಸಗೊಳಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಬರ್ಲಿನ್ ಗೋಡೆಯು 155 ಕಿಲೋಮೀಟರ್ (96 ಮೈಲಿ)ವರೆಗೆ ವಿಸ್ತರಿಸಿ, ಈ ಗೋಡೆ ಪಶ್ಚಿಮ ಬರ್ಲಿನ್ ಅನ್ನು 1989 ರವರೆಗೆ ಸುತ್ತುವರಿದಿತ್ತು. ಗೋಡೆ ದಾಟಲು ಜನರು ಸಾಮೂಹಿಕ ಪ್ರತಿಭಟನೆಗಳನ್ನು ಅನುಸರಿಸಿದ ನಂತರ ಪೂರ್ವ ಜರ್ಮನಿಯ ಅಧಿಕಾರಿಗಳು ಅನಿವಾರ್ಯವಾಗಿ ಗೋಡೆಯ ಗೇಟುಗಳನ್ನು ತೆರೆದರು. ಒಂದು ವರ್ಷದೊಳಗೆ, ಪೂರ್ವ ಮತ್ತು ಪಶ್ಚಿಮ ಜರ್ಮನಿ ಮತ್ತೆ ಒಂದಾದವು.

ಆ ಅವಧಿಯ ನೆನಪುಗಳು ಮಸುಕಾಗದಂತೆ ಜರ್ಮನರನ್ನು ಸ್ಮರಿಸಿಕೊಂಡ ಸ್ಟೈನ್ಮೀರ್, ಮುಂದಿನ ತಿಂಗಳು ದೇಶದಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಜನರಿಗೆ ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.