ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಗಿ ಹಿಡಿದಿದ್ದ ಪಿಸ್ತೂಲ್‌ನಿಂದ ಆಕಸ್ಮಿಕ ಹಾರಿದ ಗುಂಡು; 4 ವರ್ಷದ ಅಕ್ಕ ಸಾವು

Last Updated 13 ಮಾರ್ಚ್ 2023, 19:39 IST
ಅಕ್ಷರ ಗಾತ್ರ

ಹ್ಯೂಸ್ಟನ್‌: ಟೆಕ್ಸಾಸ್‌ನ ಮನೆಯೊಂದರಲ್ಲಿ ಇದ್ದ ಗುಂಡು ತುಂಬಿದ್ದ ಪಿಸ್ತೂಲ್‌ ಅನ್ನು ಮೂರು ವರ್ಷದ ಬಾಲೆ ಆಟಿಕೆ ಎಂಬಂತೆ ಹಿಡಿದು ಟ್ರಿಗರ್‌ ಒತ್ತಿದ್ದರಿಂದ ಗುಂಡು ಹಾರಿ ನಾಲ್ಕು ವರ್ಷದ ಅವಳ ಅಕ್ಕ ಮೃತಪಟ್ಟಿದ್ದಾಳೆ.

‘ಉತ್ತರ ಹ್ಯೂಸ್ಟನ್‌ ರಸ್ತೆಯಲ್ಲಿರುವ ವಸತಿ ಸಮುಚ್ಚಯದಲ್ಲಿ ಈ ಘಟನೆ ನಡೆದಿದ್ದು, ಪಾಲಕರು ಬೇರೆ ಕೊಠಡಿಯಲ್ಲಿದ್ದರು. 3 ವರ್ಷದ ಮಗು ಲೋಡ್‌ ಮಾಡಿದ್ದ ಅರೆ–ಸ್ವಯಂಚಾಲಿತ ಪಿಸ್ತೂಲ್‌ ತೆಗೆದುಕೊಂಡು ಆಟಿಕೆಯಂತೆ ಬಳಸಿದ್ದಳು. ಪಾಲಕರಿಗೆ ಒಂದು ಬಾರಿ ಗುಂಡು ಹಾರಿದ ಸದ್ದು ಕೇಳಿಸಿತ್ತು. ಅವರು ಕೊಠಡಿಗೆ ಧಾವಿಸಿ ಬಂದಾಗ ಇನ್ನೊಬ್ಬ ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡಿತು. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಮಗು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT