ಎಪಿ

ಲಂಡನ್: ಪ್ಯಾಲೆಸ್ಟೀನ್ ಪರ ಹೋರಾಟಗಾರರನ್ನು ಬೆಂಬಲಿಸಿ ಧರಣಿ ನಡೆಸುತ್ತಿರುವ ಸ್ವೀಡನ್ನ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ನಿಷೇಧಿತ ಸಂಘಟನೆಯೊಂದರ ಬೆಂಬಲಕ್ಕೆ ನಿಂತ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ಯಾಲೆಸ್ಟೀನ್ ಪರ ಬೀದಿಗಳಿದಿದ್ದ ಹೋರಾಟಗಾರರನ್ನು ಬಂಧಿಸಿ, ಜೈಲಿನಲ್ಲಿರಿಸಲಾಗಿದೆ. ತಮ್ಮ ವಿರುದ್ಧ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ಬಂಧಿಸಿ ಜೈಲಿನಲ್ಲಿ ಇರಿಸಿದ್ದನ್ನು ಖಂಡಿಸಿ ಹೋರಾಟಗಾರರು ಸೆರೆಮನೆಯಲ್ಲಿಯೇ ಪ್ರತಿಭಟಿಸುತ್ತಿದ್ದಾರೆ. ಇವರನ್ನು ಬೆಂಬಲಿಸಿ ಗ್ರೆಟಾ ಹೋರಾಟ ಕೈಗೊಂಡಿದ್ದಾರೆ.

22 ವರ್ಷದ ಗ್ರೆಟಾ ಅವರು ತಮ್ಮನ್ನು ಬೆಂಬಲಿಸಿ, ಭಿತ್ತಿಪತ್ರ ಹಿಡಿದು ಪ್ರತಿಭಟಿಸುತ್ತಿರುವ ವಿಡಿಯೊವನ್ನು ‘ಪ್ಯಾಲೆಸ್ಟೀನ್ ಆ್ಯಕ್ಷನ್’ ಸಂಘಟನೆ ಹಂಚಿಕೊಂಡಿತ್ತು. ಈ ಸಂಘಟನೆಯನ್ನು ಬ್ರಿಟನ್ ಸರ್ಕಾರ ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಿದ್ದು, ನಿಷೇಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.