ಹೂಡಿಕೆ ಅಥವಾ ಆಸ್ತಿ ಕೊಳ್ಳುವ ವಿಚಾರದಲ್ಲಿ ಮಡದಿಯೊಂದಿಗಿನ ಪ್ರಸ್ತಾಪ ಫಲಕಾರಿಯಾಗುತ್ತದೆ. ಧಾರ್ಮಿಕ ವಿಚಾರಗಳತ್ತ ಮನಸ್ಸು ಹರಿಯುವುದು. ಮನೆಯಲ್ಲಿ ಅತಿಥಿ ಸತ್ಕಾರದಂತಹ ಕಾರ್ಯ ಕೈಗೊಳ್ಳಬಹುದು.
3 months ago
ವೃಷಭ
ವಾಹನದ ಅನಿವಾರ್ಯತೆ ಹೆಚ್ಚಿರುವುದರಿಂದ ನೂತನ ವಾಹನ ಖರೀದಿ ಬಗ್ಗೆ ಗಮನಹರಿಸಿ. ಕಾನೂನು ಕಾಯಿದೆ ವಿಚಾರದಲ್ಲಿ ಹೋರಾಟ ನೆಡೆಸಿದರೆ ಜಯ ನಿಮ್ಮಪಾಲಿಗಿರುವುದು. ಬದುಕಿನಲ್ಲಿ ಸ್ಥಿರತೆ ಭಾವ ಇರುವುದು.
3 months ago
ಮಿಥುನ
ದೇವಿ ಕೃಪಾಕಟಾಕ್ಷಕ್ಕೆ ಪಾತ್ರರಾದ ಕಾರಣದಿಂದ ಬರಬೇಕಿದ್ದ ಹಣದಲ್ಲಿ ಅಸಲು ಮೊತ್ತ ಕೈ ಸೇರುವುದು. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಉದ್ಯೋಗದ ಸಂದರ್ಶನಕ್ಕಾಗಿ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಿರಿ.
3 months ago
ಕರ್ಕಾಟಕ
ವೃತ್ತಿಯಲ್ಲಿ ಸಮಸ್ಯೆ ಎದುರಾಗುವ ಪ್ರಸಂಗ ಬಂದರೂ ಧೈರ್ಯದಿಂದ ಎದುರಿಸಿ. ಲೇವಾದೇವಿ ವ್ಯವಹಾರದವರಿಗೆ ನಷ್ಟ ಸಂಭವಿಸಬಹುದು. ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಯ್ಕೆಗೊಳ್ಳುವಿರಿ.
3 months ago
ಸಿಂಹ
ದೂರ ದೃಷ್ಟಿ ಇಟ್ಟುಕೊಂಡು ಈಗಿನ ಪ್ರಪಂಚದ ಓಟಕ್ಕೆ ಸರಿಯಾಗಿ ಕಾರ್ಯ ಪ್ರವೃತ್ತರಾಗುವುದು ಉತ್ತಮ. ಮಹಿಳಾ ಉದ್ಯಮಿಗಳಿಗೆ ರಫ್ತು ಕ್ಷೇತ್ರದಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯುವುದು. ದೇವರಲ್ಲಿ ಶ್ರದ್ಧೆ ಹೆಚ್ಚುವುದು.
3 months ago
ಕನ್ಯಾ
ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿರುವವರಿಗೆ ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಆದಾಯ. ಸೇವಕ ವರ್ಗದವರಿಗೆ ಆದಾಯ ಹೆಚ್ಚಿದಂತೆ ಕೆಲಸದ ಪ್ರಮಾಣ ಹೆಚ್ಚುವುದು. ಸ್ವಂತ ವಿಷಯಗಳಿಗೆ ಮೊದಲ ಆದ್ಯತೆ ನೀಡಿ.
3 months ago
ತುಲಾ
ರಾಜಕಾರಣದಲ್ಲಿ ಹೆಚ್ಚಿನ ಸಮಯ ಕಳೆಯಬೇಕಾದ ಅನಿವಾರ್ಯತೆ ಉಂಟಾಗುವುದು. ವಿದ್ಯುತ್ ಇಲಾಖೆ ಸಿಬ್ಬಂದಿಗೆ ತುರ್ತು ಕೆಲಸಗಳ ನಿರ್ವಹಣೆ ಹೆಚ್ಚಾಗಲಿದೆ. ಅತಿಥಿಗಳ ಆಗಮನ ಸಂತಸವನ್ನು ತಂದೀತು.
3 months ago
ವೃಶ್ಚಿಕ
ಹೋಟೆಲ್ ಉದ್ಯಮದವರಿಗೆ ಮತ್ತು ಟ್ರಾವೆಲಿಂಗ್ ಏಜೆಂಟ್‌ಗಳಿಗೆ ನಿರೀಕ್ಷೆಗೂ ಮೀರಿದ ಆದಾಯ. ವಿವಾಹ ಸಂಬಂಧ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದು ಸರಿಯಲ್ಲ. ದಳ್ಳಾಳಿಗಳಿಗೆ ಉತ್ತಮ ಆದಾಯವಿರುತ್ತದೆ.
3 months ago
ಧನು
ಉನ್ನತ ವ್ಯಾಸಾಂಗ ಮಾಡುತ್ತಿರುವವರಿಗೆ ಉದ್ಯೋಗದ ಬಗ್ಗೆ ಆಸಕ್ತಿ ಹೆಚ್ಚುವುದು, ಆದರೆ ವಿದ್ಯಾಭ್ಯಾಸ ನಿಲ್ಲಿಸುವುದು ಸರಿಯಲ್ಲ. ನಿಮಗಿರುವ ದೈವಾನುಗ್ರಹದಿಂದ ಕೆಲಸಗಳೆಲ್ಲ ನಿರಾತಂಕವಾಗಿ ನೆರೆವೇರುವುದು.
3 months ago
ಮಕರ
ಕೈಗಾರಿಕೆ ಹಾಗೂ ವಾಣಿಜ್ಯ ಉದ್ಯಮದ ಸುಧಾರಣೆಗೆ ಸಾಕಷ್ಟು ಅವಕಾಶ ಒದಗಿ ಬರುವುವು. ಸಂಸ್ಥೆಯ ಬೆಳವಣಿಗೆಯ ಜೊತೆಯಲ್ಲಿ ವೈಯುಕ್ತಿಕ ಬೆಳವಣಿಗೆಗೂ ಗಮನ ಕೊಡಿ. ಮುಂದಿನ ವ್ಯಾಸಂಗದ ಬಗ್ಗೆ ತೀರ್ಮಾನಿಸಿ.
3 months ago
ಕುಂಭ
ಬದುಕಿನ ಕವಲುದಾರಿಯಲ್ಲಿರುವ ನಿಮಗೆ ಸರಿಯಾದ ಮಾರ್ಗದರ್ಶನದ ಕೊರತೆ ಇದೆ. ಅದರಲ್ಲಿ ನಿಮಗೆ ಯಶಸ್ಸು ಖಚಿತವೆನಿಸಿದ್ದರೂ ಜಾಗ್ರತೆ ವಹಿಸುವುದು ಮೇಲು. ಉದರ ವ್ಯಾಧಿಯಂತಹ ಸಮಸ್ಯೆ ಎದುರಾಗಬಹುದು.
3 months ago
ಮೀನ
ಮಾತುಗಾರರಿಗೆ, ವಾಗ್ಮಿಗಳಿಗೆ, ಬೋಧಕ ವರ್ಗದವರಿಗೆ, ಸಾಂಸ್ಕೃತಿಕ ಕಲಾವಿದರಿಗೆ ವೃತ್ತಿಯಲ್ಲಿ ಮುಂಬಡ್ತಿ ಅಥವಾ ಸನ್ಮಾನ ದೊರಕಲಿದೆ. ಶ್ರಮಕ್ಕೆ ತಕ್ಕಂತಹ ಪ್ರತಿಫಲ ಸಿಗದಿರುವ ಕಾರಣವಾಗಿ ದುಃಖವಾಗಬಹುದು.