ನ್ಯೂಯಾರ್ಕ್: 'ಇಡ್ಲಿ ಜತೆಗೆ ಒಳ್ಳೆಯ ಸಾಂಬಾರ್ ಮತ್ತು ಉತ್ತರ ಭಾರತದ ಖಾದ್ಯಗಳಲ್ಲಿರುವ ಯಾವುದೇ ಟಿಕ್ಕಾ(ರೋಟಿ) ನನ್ನ ನೆಚ್ಚಿನ ಬೆಳಗಿನ ಉಪಾಹಾರ...'

ಹೀಗೆಂದು ಹೇಳಿದ್ದು, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನಗೊಂಡಿರುವ, ಭಾರತದ ನಂಟಿರುವ ಅಭ್ಯರ್ಥಿ ಕಮಲಾ ಹ್ಯಾರಿಸ್.

ಇನ್ಸ್ಟಾಗ್ರಾಮ್ ಬಳಕೆದಾರರು ಕೇಳಿದ ಕೆಲವು ಪ್ರಶ್ನೆಗಳಿಗೆ ಕ್ಯಾಲಿಫೋರ್ನಿಯಾ ಸೆನೆಟರ್ ಭಾನುವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೀಗೆ ಉತ್ತರಿಸಿದ್ದಾರೆ.

ಕಮಲಾ ಹ್ಯಾರಿಸ್ ಅವರ ತಂದೆ ಜಮೈಕಾದವರು. ತಾಯಿ ಭಾರತದವರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘ತಮ್ಮ ಬೆಳಗಿನ ಇಷ್ಟದ ಭಾರತೀಯ ಆಹಾರ ಯಾವುದು‘ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಭಾರತದ ಇಡ್ಲಿ ಮತ್ತು ಸಾಂಬಾರ್ ಅನ್ನು ಉಲ್ಲೇಖಿಸಿದ್ದಾರೆ. ಇದಾದ ನಂತರ ಉತ್ತರ ಭಾರತೀಯ ಖಾದ್ಯಗಳಲ್ಲಿ, ಯಾವುದೇ ತರಹದ ಟಿಕ್ಕಾ ಆಗಬಹುದು ಎಂದು ಹೇಳಿದ್ದಾರೆ.

‘ಪ್ರಚಾರದ ಸಮಯದಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಏನು ಮಾಡುತ್ತೀರಿ‘ ಎಂಬ ಪ್ರಶ್ನೆಗೆ ಕಮಲಾ ಅವರು, ‘ನಾನು ಪ್ರತಿದಿನ ಬೆಳಿಗ್ಗೆ ವ್ಯಾಯಾಮ ಮಾಡುತ್ತೇನೆ. ಮಕ್ಕಳೊಂದಿಗೆ ಮಾತನಾಡುತ್ತೇನೆ ಮತ್ತು ಇಷ್ಟಪಟ್ಟು ಅಡುಗೆ ಮಾಡುತ್ತೇನೆ‘ ಎಂದು ಹೇಳಿದ್ದಾರೆ.

‘ಮುಂದಿನ ಪೀಳಿಗೆಗೆ ಯಾವ ರೀತಿಯ ಸುಸ್ಥಿರ ಮತ್ತು ಪರಿಸರ ಸ್ನೇಹಿ ಭವಿಷ್ಯವನ್ನು ನೀಡುತ್ತೀರಿ‘ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಲಾ, ‘ಜೊ ಬೈಡೆನ್ ಅವರ ನೆರವಿನೊಂದಿಗೆ, 2050ರ ವೇಳೆಗೆ ವಾತಾವರಣಕ್ಕೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಶೂನ್ಯಗೊಳಿಸುವ ಕುರಿತು ಕಾರ್ಯಸೂಚಿ ರೂಪಿಸುತ್ತೇವೆ. ಅದನ್ನು ಸಾಧಿಸಲು ಬದ್ಧತೆಯಿಂದ ಕೆಲಸ ಮಾಡುತ್ತೇವೆ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.