ವಾಷಿಂಗ್ಟನ್: ‘ಗಾಜಾ ಶಾಂತಿ ಮಂಡಳಿ’ಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನವನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದ್ದ ಭಾರತವು, ನಿನ್ನೆ (ಗುರುವಾರ) ನಡೆದ ಮಂಡಳಿಯ ಮೊದಲ ಸಭೆಯಲ್ಲಿ ವೀಕ್ಷಕ ರಾಷ್ಟ್ರವಾಗಿ ಭಾಗವಹಿಸಿದೆ.

ಅಮೆರಿಕದಲ್ಲಿರುವ ಭಾರತ ರಾಯಭಾರ ಕಚೇರಿಯ ಅಧಿಕಾರಿ ನಮಗ್ಯ ಸಿ. ಖಂಪಾ ಅವರು ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ವಾಷಿಂಗ್ಟನ್ನಲ್ಲಿರುವ ಯುಎಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ನಲ್ಲಿ ನಡೆದ ಸಭೆಯಲ್ಲಿ ಸುಮಾರು 50 ದೇಶಗಳ ಅಧಿಕಾರಿಗಳು ಭಾಗವಹಿಸಿದ್ದರು. ಇವುಗಳಲ್ಲಿ ಅಜರ್ಬೈಜಾನ್, ಬೆಲಾರಸ್, ಈಜಿಪ್ಟ್, ಹಂಗೇರಿ, ಇಂಡೋನೇಷ್ಯಾ, ಇಸ್ರೇಲ್, ಜೋರ್ಡಾನ್, ಮೊರಾಕೊ, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ಟರ್ಕಿ, ಯುಎಇ, ಉಜ್ಬೇಕಿಸ್ತಾನ್, ವಿಯೆಟ್ನಾಂ ಸೇರಿದಂತೆ 27 ದೇಶಗಳು ಮಂಡಳಿಯ ಭಾಗವಾಗಿದ್ದರೆ, ಭಾರತ, ಐರೋಪ್ಯ ಒಕ್ಕೂಟ ಸೇರಿದಂತೆ ಉಳಿದ ದೇಶಗಳು ವೀಕ್ಷಕ ರಾಷ್ಟ್ರಗಳಾಗಿ ಪ್ರತಿನಿಧಿಸಿದ್ದವು.

ಗಾಜಾದಲ್ಲಿ ಶಾಶ್ವತ ಶಾಂತಿ ನೆಲಸುವಂತೆ ಮಾಡುವ ಉದ್ದೇಶದಿಂದ ರಚಿಸಲಾಗಿರುವ ‘ಗಾಜಾ ಶಾಂತಿ ಮಂಡಳಿ’ಗೆ ಸೇರುವಂತೆ ಭಾರತ ಸೇರಿದಂತೆ ವಿವಿಧ ದೇಶಗಳ ನಾಯಕರಿಗೆ ಟ್ರಂಪ್ ಆಹ್ವಾನ ನೀಡಿದ್ದರು. ಆದರೆ, ಈ ಬಗ್ಗೆ ಭಾರತವು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ದಾವೋಸ್ನಲ್ಲಿ ನಡೆದ ಸಭೆಯಿಂದಲೂ ಭಾರತ ದೂರ ಉಳಿದಿತ್ತು.

ಫೆಬ್ರುವರಿ 12ರಂದು ನಡೆದ ಸುದ್ದಿಗೋಷ್ಠಿಯಲ್ಲಿ, ಶಾಂತಿ ಮಂಡಳಿಗೆ ಸಂಬಂಧಿಸಿದಂತೆ ಅಮೆರಿಕದ ಆಹ್ವಾನವನ್ನು ಪರಿಶೀಲಿಸುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದರು. ಇದಾದ ಒಂದು ವಾರದ ನಂತರ ಶಾಂತಿ ಮಂಡಳಿಯ ಸಭೆಗೆ ವೀಕ್ಷಕ ರಾಷ್ಟ್ರವಾಗಿ ಭಾರತ ಭಾಗವಹಿಸಿದೆ.

ಹಮಾಸ್ – ಇಸ್ರೇಲ್ ನಡುವಿನ ಯುದ್ಧದಲ್ಲಿ ಈವರೆಗೆ 72 ಸಾವಿರಕ್ಕೂ ಅಧಿಕ ಪ್ಯಾಲೆಸ್ಟೀನಿಯರು ಸಾವಿಗೀಡಾಗಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.