ಬೀಜಿಂಗ್: ಪೂರ್ವ ಲಡಾಖ್ನಲ್ಲಿ ಮೂಡಿದ್ದ ಅನಿಶ್ಚಿತತೆಯನ್ನು ಕೊನೆಗಾಣಿಸಲು ಭಾರತ–ಚೀನಾ ಸೇನೆಗಳು ಮಾಡಿಕೊಂಡಿರುವ ಒಪ್ಪಂದವನ್ನು ‘ಸಮಗ್ರವಾಗಿ ಮತ್ತು ಪರಿಣಾಮಕಾರಿಯಾಗಿ’ ಜಾರಿಗೊಳಿಸುತ್ತಿವೆ ಎಂದು ಚೀನಾದ ರಕ್ಷಣಾ ಸಚಿವಾಲಯ ಹೇಳಿದೆ.

‘ಪ್ರಸ್ತುತ, ಗಡಿ ಪ್ರದೇಶಗಳಿಗೆ ಅನ್ವಯಿಸಿ ಈ ಒಪ್ಪಂದವನ್ನು ಜಾರಿಗೊಳಿಸಲಾಗುತ್ತಿದೆ’ ಎಂದು ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ವು ಕ್ವಿಯಾನ್ ತಿಳಿಸಿದ್ದಾರೆ.

‘ಗಡಿ ಪ್ರದೇಶದಲ್ಲಿ ಶಾಂತ ವಾತಾವರಣ ಸ್ಥಾಪಿಸಲು ಭಾರತ ಸೇನೆಯ ಜೊತೆಗೂಡಿ ಕಾರ್ಯನಿರ್ವಹಿಸಲು ನಾವು ಸಿದ್ಧರಿದ್ದೇವೆ’ ಎಂದೂ ತಿಳಿಸಿದರು.

ಡೆಪ್ಸಾಂಗ್ ಮತ್ತು ಡೆಮ್ಚೊಕ್ ವಲಯದಲ್ಲಿ ನಿಯೋಜಿಸಲಾಗಿದ್ದ ಸೇನೆಯನ್ನು ಹಿಂಪಡೆಯಲು ಉಭಯ ದೇಶಗಳು ಕಳೆದ ವರ್ಷ ಒಪ್ಪಂದಕ್ಕೆ ಬಂದಿದ್ದವು.

ಒಪ್ಪಂದವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ರಷ್ಯಾದ ಕಜಾನ್ನಲ್ಲಿ ಅಕ್ಟೋಬರ್ 23ರಂದು ಚರ್ಚಿಸಿದ್ದರು. ನಂತರ ಡಿಸೆಂಬರ್ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಬೀಜಿಂಗ್ನಲ್ಲಿ ಚರ್ಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.