ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಿನಾಮ್‌ಗೆ ಆರ್ಥಿಕ ನೆರವು: ರಾಷ್ಟ್ರಪತಿ ಘೋಷಣೆ

ಸುರಿನಾಮ್‌ನಲ್ಲಿ ಕೋವಿಂದ್
Last Updated 21 ಜೂನ್ 2018, 16:39 IST
ಅಕ್ಷರ ಗಾತ್ರ

ಪರಮಾರಿಬೊ: ‘ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿ ಸಹಭಾಗಿತ್ವವನ್ನು ಮುಂದುವರಿಸುವ ನಿಟ್ಟಿನಲ್ಲಿ ಸುರಿನಾಮ್‌ ದೇಶಕ್ಕೆ ಭಾರತವು ₹ 210 ಕೋಟಿ ಸಾಲ ಹಾಗೂ ₹135 ಕೋಟಿ ಆರ್ಥಿಕ ನೆರವು ನೀಡಲಿದೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಘೋಷಿಸಿದರು.

ಲ್ಯಾಟಿನ್‌ ಅಮೆರಿಕದ ಸುರಿನಾಮ್‌ಗೆ ಮೂರು ದಿನಗಳ ಪ್ರವಾಸಕ್ಕೆ ಬಂದಿರುವ ಅವರು ಅಧ್ಯಕ್ಷ ಡಿಸೈರ್‌ ಡೆಲಾನೊ ಬೌಟೆರ್ಸ್‌ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಈ ವಿಷಯ ತಿಳಿಸಿದರು.

‘ಪಿಕಿನ್‌ಸಾರೊನಾರಿಯಾ ಪ್ರದೇಶ ದಲ್ಲಿ ವಿದ್ಯುತ್‌ ಸರಬರಾಜು ಯೋಜನೆಗೆ ₹210 ಕೋಟಿ ಸಾಲ ಹಾಗೂ 49ಗ್ರಾಮಗಳಿಗೆ ಸೋಲಾರ್‌ ವಿದ್ಯುತ್‌ ಒದಗಿಸಲು₹135 ಕೋಟಿ ಆರ್ಥಿಕ ನೆರವು ನೀಡಲಾಗುತ್ತದೆ, ಅಲ್ಲದೇ ಚೇತಕ್‌ ಹೆಲಿಕಾಪ್ಟರ್‌ಗಳ ನಿರ್ವಹಣೆಗಾಗಿ ₹23 ಕೋಟಿ ನೀಡಲಾಗುತ್ತದೆ’ ಎಂದು ಕೋವಿಂದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT