ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಭಾರಿಗೆ ತಡೆ ಕುರಿತು ಮಾಹಿತಿ ತಿರುಚಲಾಗಿದೆ: ಸ್ಕಾಟ್‌ಲೆಂಡ್‌ನ ಸಿಖ್‌ ಸಮುದಾಯ

Published 1 ಅಕ್ಟೋಬರ್ 2023, 17:00 IST
Last Updated 1 ಅಕ್ಟೋಬರ್ 2023, 17:00 IST
ಅಕ್ಷರ ಗಾತ್ರ

ಲಂಡನ್‌: ‘ಸ್ಕಾಟ್‌ಲೆಂಡ್‌ನ ಗ್ಯಾಸ್ಗೊ ನಗರದ ಗುರುದ್ವಾರದ ಬಳಿ ಶುಕ್ರವಾರದ ನಡೆದ ಘಟನೆ ಕುರಿತು ಸುಳ್ಳು ಮಾಹಿತಿ ಪಸರಿಸಲಾಗಿದೆ’ ಎಂದು ಸ್ಕಾಟ್ಲೆಂಡ್‌ನ ಸಿಖ್‌ ಸಂಘಟನೆಯೊಂದು ಆರೋಪಿಸಿದೆ.

ಬ್ರಿಟನ್‌ನಲ್ಲಿನ ಭಾರತೀಯ ರಾಯಭಾರಿ ವಿಕ್ರಮ್‌ ದೊರೈಸ್ವಾಮಿ ಅವರು ಸ್ಕಾಟ್ಲೆಂಡ್‌ನ ಗುರುದ್ವಾರ ಪ್ರವೇಶಿಸುವುದನ್ನು ಖಾಲಿಸ್ತಾನ ಪರ ತೀವ್ರಗಾಮಿಗಳು ತಡೆದ ಘಟನೆ ಕುರಿತು ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಂಘಟನೆಯು ಪ್ರತಿಕ್ರಿಯೆ ನೀಡಿದೆ. 

ದೊರೈಸ್ವಾಮಿ ಅವರು ಗುರುದ್ವಾರಕ್ಕೆ ಭೇಟಿ ನೀಡುವುದನ್ನು ವಿರೋಧಿಸಿ ಸ್ಥಳದಲ್ಲಿ ಶಾಂತಿಯುತವಾಗಿ ಮತ್ತು ಕಾನೂನು ಬದ್ಧವಾಗಿ ಪ್ರತಿಭಟನೆ ನಡೆಸಲಾಗುತ್ತಿತ್ತು. ದೊರೈಸ್ವಾಮಿ ಅವರು ಕಾರಿನಲ್ಲಿಯೇ ಸುರಕ್ಷಿತವಾಗಿದ್ದರು ಮತ್ತು ಸಿಖ್‌ ಸಮುದಾಯದ ತರ್ಕಬದ್ಧ ಪ್ರಶ್ನೆಗಳಿಗೂ ಅವರು ಉತ್ತರಿಸದೇ ಅಲ್ಲಿಂದ ನಿರ್ಗಮಿಸಲು ನಿರ್ಧರಿಸಿದರು. ಆದರೆ ಈಗ ಘಟನೆ ಕುರಿತು ಸುಳ್ಳು ಮಾಹಿತಿ ಹರಿದಾಡುತ್ತಿದೆ ಎಂದು ಸಂಘಟನೆಯು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದೆ. 

ಸುಮಾರು 5 ಲಕ್ಷ ಸಿಖ್ಖರು ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಸ್ಕಾಟ್‌ಲೆಂಡ್‌ನಲ್ಲಿಯೂ ಅವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಬಲಪಂಥೀಯ ಹಿಂದೂ ಮುಖಂಡರ ವಿರುದ್ಧ ಭಯೋತ್ಪಾದನಾ ದಾಳಿ ಮತ್ತು ಹತ್ಯೆಯ ಸಂಚು ರೂಪಿಸಿದ್ದ ಆರೋಪದ ಮೇಲೆ ಸ್ಕಾಟ್‌ಲೆಂಡ್‌ ಮೂಲದ ಸಿಖ್‌ ಬ್ಲಾಗರ್‌ ಜಗ್ತಾರ್‌ ಸಿಂಗ್‌ ಜೋಹಾಲ್‌ನನ್ನು ಭಾರತವು ವಶಕ್ಕೆ ತೆಗೆದುಕೊಂಡಿದೆ.

ಖಾಲಿಸ್ತಾನ ಪರ ಹೋರಾಟಗಾರ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಆರೋಪಿಸಿದ ಬಳಿಕ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. 

ಈ ಘಟನೆಗಳ ಬಳಿಕ ವಿದೇಶಗಳಲ್ಲಿ ನೆಲೆಸಿರುವ ಸಿಖ್‌ ಸಮುದಾಯದ ಜೊತೆ ಭಾರತ ಸಂಬಂಧ ಅಷ್ಟೇನು ಉತ್ತಮವಾಗಿಲ್ಲ. ಈ ನಡುವೆಯೇ ಸ್ಕಾಟ್‌ಲೆಂಡ್‌ನಲ್ಲಿ ಈ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT