ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆ: ಕರಡು ನಿರ್ಣಯದ ವಿರುದ್ಧ ಭಾರತ ಮತ

Last Updated 23 ಜುಲೈ 2022, 11:49 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ):ವಿಶ್ವಸಂಸ್ಥೆಯ (ಯುಎನ್) ಎನ್‌ಜಿಒ ಸಮಿತಿಯಲ್ಲಿ ವರ್ಷಗಳಿಂದ ನಿರ್ಬಂಧಿಸಿರುವಆರು ಮಾನವ ಹಕ್ಕುಗಳ ಗುಂಪುಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ವಿಶೇಷ ಸಮಾಲೋಚನಾ ಸ್ಥಾನಮಾನ ನೀಡುವಂತೆ ಶಿಫಾರಸು ಮಾಡಿ, ಅಮೆರಿಕ ಮಂಡಿಸಿದ ಕರಡು ನಿರ್ಣಯದ ವಿರುದ್ಧ ಭಾರತ ಸೇರಿದಂತೆ ಏಳು ರಾಷ್ಟ್ರಗಳು ಮತ ಚಲಾಯಿಸಿವೆ.

ವಿಶ್ವಸಂಸ್ಥೆ ಪ್ರಕಾರ, ವಿಕಿಪೀಡಿಯಾ ನಡೆಸುವ ಪ್ರತಿಷ್ಠಾನ ಸೇರಿದಂತೆ ಇತರೆ ಆರು ಸರ್ಕಾರೇತರ ಸಂಸ್ಥೆಗಳನ್ನು ಅಮೆರಿಕ ಪ್ರಸ್ತಾಪಿಸಿದ ಕರಡು ಪಟ್ಟಿಗೆ ಸೇರಿಸಲಾಯಿತು.54 ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸಭೆಯಲ್ಲಿ, ಸರ್ಕಾರೇತರ ಸಂಸ್ಥೆಗಳ ಸಮಿತಿಯು ವಿಶೇಷ ಸಲಹಾ ಸ್ಥಾನಮಾನಕ್ಕಾಗಿ 203 ಗುಂಪುಗಳನ್ನು ಶಿಫಾರಸು ಮಾಡಿದೆ.

ಯುಎನ್ ವೆಬ್‌ಸೈಟ್‌ ವರದಿ ಪ್ರಕಾರ, ಅಮೆರಿಕ ಪ್ರತಿನಿಧಿ ಪ್ರಸ್ತುತ ಪಡಿಸಿದ ಕೌನ್ಸಿಲ್‌ನೊಂದಿಗೆ ಸಮಾಲೋಚನಾ ಸ್ಥಾನಮಾನ ಪಡೆಯುವ ಸರ್ಕಾರೇತರ ಸಂಸ್ಥೆಗಳ ಪಟ್ಟಿಯ ಕರಡು ನಿರ್ಣಯ ‘ಸಣ್ಣ ಕೋಲಾಹಲ’ ಉಂಟು ಮಾಡಿತು.

ಒಟ್ಟು 36 ದೇಶಗಳ ಪ್ರಾಯೋಜಕತ್ವದ ಕರಡು ನಿರ್ಣಯವು ಸಮಿತಿ ಪ್ರಸ್ತಾಪಿಸಿದ ಪಟ್ಟಿಗೆ ಆರು ಹೆಚ್ಚುವರಿ ಸರ್ಕಾರೇತರ ಸಂಸ್ಥೆಗಳನ್ನು ಶಿಫಾರಸು ಮಾಡಿದೆ. ಚೀನಾ, ಭಾರತ, ಕಜಕಿಸ್ತಾನ್, ನಿಕರಾಗುವಾ, ನೈಜೀರಿಯಾ, ರಷ್ಯಾ ಮತ್ತು ಜಿಂಬಾಬ್ವೆ ವಿರುದ್ಧವಾಗಿ ಮತ ಚಲಾಯಿಸಿದರೆ, 23 ದೇಶಗಳು ಪರವಾಗಿ ಮತ ಹಾಕಿದವು. ಅಲ್ಲದೆ 18 ರಾಷ್ಟ್ರಗಳ ಸದಸ್ಯರು ಗೈರು ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT