ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಖಾಲಿಸ್ತಾನ’ ಪರ ಘೋಷಣೆ: ಕೆನಡಾ ವಿರುದ್ಧ ಪ್ರತಿಭಟನೆ ದಾಖಲಿಸಿದ ಭಾರತ

Published 29 ಏಪ್ರಿಲ್ 2024, 16:31 IST
Last Updated 29 ಏಪ್ರಿಲ್ 2024, 16:31 IST
ಅಕ್ಷರ ಗಾತ್ರ

ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಹಲವು ನಾಯಕರು ಭಾಗವಹಿಸಿದ್ದ ಟೊರೊಂಟೊದಲ್ಲಿನ ಸಾರ್ವಜನಿಕ ಕಾರ್ಯಕ್ರಮದಲ್ಲಿ ‘ಖಾಲಿಸ್ತಾನ’ ಪರ ಘೋಷಣೆ ಕೂಗಿರುವುದನ್ನು ಖಂಡಿಸಿ ಭಾರತವು ಸೋಮವಾರ ಕೆನಡಾದ ಡೆಪ್ಯುಟಿ ಹೈಕಮಿಷನರ್ ಅವರನ್ನು ಕರೆಸಿ ತೀವ್ರ ಪ್ರತಿಭಟನೆ ದಾಖಲಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ), ಟ್ರೊಡೊ ಅವರು ಭಾನುವಾರ ಭಾಷಣ ಮಾಡುತ್ತಿದ್ದ ಕಾರ್ಯಕ್ರಮದಲ್ಲಿ ಈ ರೀತಿ ಘೋಷಣೆಗಳನ್ನು ಕೂಗಿರುವುದು ಕೆನಡಾದಲ್ಲಿ ಪ್ರತ್ಯೇಕತಾವಾದ, ಉಗ್ರವಾದ ಮತ್ತು ಹಿಂಸಾಚಾರಕ್ಕೆ ರಾಜಕೀಯ ಬೆಂಬಲ ನೀಡುತ್ತಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ದೂಷಿಸಿದೆ.

ಇಂತಹ ಕ್ರಮಗಳು ಭಾರತ-ಕೆನಡಾ ಸಂಬಂಧಗಳ ಮೇಲೆ ಪರಿಣಾಮ ಬೀರುವುದಲ್ಲದೆ, ಕೆನಡಾದಲ್ಲಿ ತನ್ನದೇ ದೇಶದ ನಾಗರಿಕರ ಮೇಲೆ ಹಾನಿಯಾಗುವಂತೆ ಹಿಂಸಾಚಾರ ಮತ್ತು ಅಪರಾಧ ಕೃತ್ಯವನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸುತ್ತದೆ ಎಂದೂ ಅದು ಹೇಳಿದೆ.

ಸಾರ್ವಜನಿಕ ಸಮಾರಂಭದಲ್ಲಿ ಟ್ರೊಡೊ ಅವರು ಮಾಡಿದ ಭಾಷಣದಲ್ಲಿ, ಸಿಖ್ ಸಮುದಾಯದ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ರಕ್ಷಿಸಲು ಕೆನಡಾ ಅಚಲವಾದ ಬದ್ಧತೆ ಹೊಂದಿದೆ ಎಂದು ಪುನರುಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT