ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೀನ್‌ಕಾರ್ಡ್‌ ವಿತರಣೆಗೆ ಒತ್ತಾಯ: ಭಾರತೀಯ ಅಮೆರಿಕನ್ನರಿಂದ ಪ್ರತಿಭಟನೆ

ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವವರು ಭಾಗಿ
Last Updated 18 ಮಾರ್ಚ್ 2021, 9:02 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಗ್ರೀನ್‌ ಕಾರ್ಡ್‌ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಭಾರತೀಯ ಅಮೆರಿಕನ್ನರು ಇಲ್ಲಿನ ಕ್ಯಾಪಿಟಲ್‌ ಮುಂದೆ ಪ್ರತಿಭಟನೆನಡೆಸಿದರು.

ಗ್ರೀನ್‌ ಕಾರ್ಡ್‌ ವಿತರಣೆಗಾಗಿ ದೇಶವಾರು ಕೋಟಾ ನಿಗದಿ ಮಾಡಿರುವುದನ್ನು ರದ್ದುಪಡಿಸುವಂತೆಯೂ ಪ್ರತಿಭಟನಾಕಾರರು ಒತ್ತಾಯಿಸಿದರು.

‘ನಾವು ಕೋವಿಡ್‌ ವಾರಿಯರ್ಸ್‌. ದಶಕಗಳಿಂದಲೂ ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ನಾವು ಈಗ ಮುಂಚೂಣಿಯಲ್ಲಿದ್ದು ಕೋವಿಡ್ ರೋಗಿಗಳ ಸೇವೆ ಮಾಡುತ್ತಿದ್ದೇವೆ. ಗೀನ್‌ ಕಾರ್ಡ್‌ ವಿಷಯದಲ್ಲಿ ನಮಗಾಗಿರುವ ಅನ್ಯಾಯವನ್ನು ಸರಿಪಡಿಸಬೇಕು. ನಮ್ಮ ಗುಲಾಮಗಿರಿಗೆ ಅಂತ್ಯ ಹಾಡುವಂತೆ ಒತ್ತಾಯಿಸಲು ಇಲ್ಲಿ ಸೇರಿದ್ದೇವೆ’ ಎಂದು ಸೋಂಕು ರೋಗಗಳ ತಜ್ಞ ಡಾ.ರಾಜ್‌ ಕರ್ನಾಟಕ, ಶ್ವಾಸಕೋಶ ತಜ್ಞ ಡಾ.ಪ್ರಣವ್‌ ಸಿಂಗ್‌ ಹೇಳಿದರು.

‘ನಮ್ಮ ವೈದ್ಯಕೀಯ ಶಿಕ್ಷಣ, ತರಬೇತಿಯನ್ನು ಅಮೆರಿಕದಲ್ಲಿಯೇ ‍ಪೂರೈಸಿದ್ದೇವೆ. ಗ್ರಾಮೀಣ ಭಾಗದಲ್ಲಿ, ಆರೋಗ್ಯ ಸೌಲಭ್ಯ ವಂಚಿತ ಪ್ರದೇಶಗಳಲ್ಲಿ ನಾವು ಸೇವೆ ಸಲ್ಲಿಸುತ್ತಿದ್ದೇವೆ. ಗ್ರೀನ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ಕಾಯುತ್ತಿದ್ದೇವೆ. ದೇಶವಾರು ಕೋಟಾ ನಿಗದಿ ಮಾಡಿರುವ ಕಾರಣ ನಮಗೆ ಗ್ರೀನ್‌ ಕಾರ್ಡ್‌ ಸಿಗುತ್ತಿಲ್ಲ’ ಎಂದು ಈ ಇಬ್ಬರು ವೈದ್ಯರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT