ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾನ್‌ಫ್ರಾನ್ಸಿಸ್ಕೊ: ಕಾನ್ಸುಲೇಟ್‌ ಕಚೇರಿ ಮೇಲಿನ ದಾಳಿ ಖಂಡಿಸಿ ಭಾರತೀಯರಿಂದ ರ್‍ಯಾಲಿ

Published 15 ಜುಲೈ 2023, 14:07 IST
Last Updated 15 ಜುಲೈ 2023, 14:07 IST
ಅಕ್ಷರ ಗಾತ್ರ

ಸ್ಯಾನ್‌ ಫ್ರಾನ್ಸಿಸ್ಕೊ (ಅಮೆರಿಕ): ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಭಾರತದ ಕಾನ್ಸುಲೇಟ್‌ ಕಚೇರಿ ಮೇಲೆ ಇತ್ತೀಚೆಗೆ ಖಾಲಿಸ್ತಾನ ಪರ ಪ್ರತಿಭಟನಕಾರರು ನಡೆಸಿದ್ದ ದಾಳಿ ಖಂಡಿಸಿ ಭಾರತೀಯ ಅಮೆರಿಕನ್ನರು ಶನಿವಾರ ಶಾಂತಿಯುತ ರ್‍ಯಾಲಿ ನಡೆಸಿದರು. ಈ ಮೂಲಕ ಭಾರತದ ಪರ ಒಗ್ಗಟ್ಟು ಪ್ರದರ್ಶಿಸಿದರು.  

ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದ ಪ್ರತಿಭಟನಕಾರರು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು. 

ಇದಕ್ಕೂ ಮೊದಲು, ಗುರುವಾರ ಕಾನ್ಸುಲೇಟ್‌ ಕಚೇರಿಗೆ ಭೇಟಿ ನೀಡಿದ್ದ, ಅಮೆರಿಕದ ಭಾರತೀಯ ರಾಯಭಾರಿ ತರಂಜಿತ್‌ ಸಿಂಗ್‌ ಸಂಧು, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.  

’ತೀವ್ರಗಾಮಿ ಖಾಲಿಸ್ತಾನಿ ಸಿದ್ಧಾಂತಗಳು ದ್ವಿಪಕ್ಷೀಯ ಸಂಬಂಧಗಳಿಗೆ ಹಾನಿಯುಂಟು ಮಾಡುತ್ತವೆ. ಹೀಗಾಗಿ ಅದಕ್ಕೆ ಅವಕಾಶ ನೀಡಬಾರದು‘ ಎಂದು ವಿದೇಶಾಂಗ ಸಚಿವ ಜೈಶಂಕರ್‌ ಈಗಾಗಲೇ ಕೆನಡಾ, ಬ್ರಿಟನ್‌, ಅಮೆರಿಕ, ಆಸ್ಟ್ರೇಲಿಯಾಕ್ಕೆ ಮನವಿ ಮಾಡಿದ್ದಾರೆ. 

ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರುವ ಭಾರತೀಯ ಕಾನ್ಸುಲೇಟ್‌ ಕಚೇರಿ ಮೇಲೆ ನಡೆದ ದಾಳಿಗೆ ಸಂಬಂಧಿಸಿದ ವಿಡಿಯೊಗಳನ್ನು ಜುಲೈ 2ರಂದು ಖಾಲಿಸ್ತಾನ ಪರ ಪ್ರತಿಭಟನಾಕಾರರು ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಕಳೆದ ಕೆಲವು ತಿಂಗಳಲ್ಲಿ ಭಾರತದ ಕಾನ್ಸುಲೇಟ್‌ ಕಚೇರಿ ಮೇಲೆ ನಡೆದ ಎರಡನೇ ದಾಳಿ ಇದಾಗಿತ್ತು. ಮಾರ್ಚ್‌ 19ರಂದು ದಾಳಿ ನಡೆಸಿದ್ದ ಪ್ರತಿಭಟನಕಾರರು ಕಾನ್ಸುಲೇಟ್‌ ಕಚೇರಿಗೆ ಬೆಂಕಿ ಹಚ್ಚಿ ಹಾನಿಯುಂಟು ಮಾಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT