ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳ ಓದಿಗೆ ₹18 ಕೋಟಿಯ ವಿಲಾಸಿ ಬಂಗಲೆ ಖರೀದಿಸಿದ ಅಪ್ಪ!

Last Updated 15 ಸೆಪ್ಟೆಂಬರ್ 2018, 15:56 IST
ಅಕ್ಷರ ಗಾತ್ರ

ಲಂಡನ್: ಮುಂದಿನ ವಾರ ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಆರಂಭಿಸಲಿರುವ ಮಗಳಿಗಾಗಿ ಭಾರತೀಯ ಮೂಲದ ಉದ್ಯಮಿಯೊಬ್ಬರು ಸ್ಕಾಟ್ಲೆಂಡ್‌ನಲ್ಲಿ ₹18 ಕೋಟಿ ಮೌಲ್ಯದ ವಿಲಾಸಿ ಬಂಗಲೆಯನ್ನೇ ಖರೀದಿಸಿದ್ದಾರೆ.

‘ಈಡನ್ ಮ್ಯಾನ್‌ಷನ್’ ಹೆಸರಿನ ಈ ಕಟ್ಟಡದಲ್ಲಿ 8 ಬೆಡ್‌ರೂಮ್‌ಗಳು, ಪ್ರತ್ಯೇಕ ಚಿತ್ರಮಂದಿರ, ಮದ್ಯದ ಸೆಲ್ಲಾರ್, ಅಶ್ವಶಾಲೆ ಇದೆ. ಐದು ಎಕರೆ ವಿಸ್ತೀರ್ಣದ ಜಾಗವಿದೆ. ದಕ್ಷಿಣ ಭಾರತೀಯ ಅಡುಗೆಯವ ಸೇರಿ 12 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ.

ಮೊದಲ ಮಹಾಯುದ್ಧದ ಫೀಲ್ಡ್‌ ಮಾರ್ಷಲ್ ಅರ್ಲ್ ಹೈಗ್‌ ಅವರ ಕುಟುಂಬಕ್ಕೆ ಸೇರಿದ ಈ ಕಟ್ಟಡ 1860ರಲ್ಲಿ ನಿರ್ಮಾಣವಾಗಿತ್ತು. ಸ್ಕಾಟ್ಲೆಂಡ್‌ನ ಪುರಾತನ ವಿಸ್ಕಿ ತಯಾರಿಕೆಯಲ್ಲಿ ಈ ಕುಟುಂಬ ತೊಡಗಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT