ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಎಂಜಿನಿಯರ್‌ಗೆ ಕಾಮನ್‌ವೆಲ್ತ್ ಆವಿಷ್ಕಾರ ಪ್ರಶಸ್ತಿ

ಪ್ರಿನ್ಸ್‌ ಹ್ಯಾರಿ ಅವರಿಂದ ಪ್ರಶಸ್ತಿ ಪ್ರದಾನ
Last Updated 18 ಜೂನ್ 2019, 18:57 IST
ಅಕ್ಷರ ಗಾತ್ರ

ಲಂಡನ್: ನವಜಾತ ಶಿಶುಗಳಿಗೆ ಕಡಿಮೆ ವೆಚ್ಚದಲ್ಲಿ ಉಸಿರಾಟದ ವ್ಯವಸ್ಥೆ ಒದಗಿಸುವ ಉಪಕರಣ ವಿನ್ಯಾಸಗೊಳಿಸಿರುವ, ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ನಿತೇಶ್ ಕುಮಾರ್ ಜಾಂಗೀರ್ ಅವರಿಗೆ ಬ್ರಿಟನ್‌ನ ‘ಕಾಮನ್‌ವೆಲ್ತ್ ಸೆಕ್ರೆಟರಿ ಜನರಲ್ಸ್ ಇನೊವೆಷನ್ ಫಾರ್ ಸಸ್ಟೇನೆಬಲ್ ಡೆವಲಪ್‌ಮೆಂಟ್’ ಪ್ರಶಸ್ತಿ ಲಭಿಸಿದೆ.

ಲಂಡನ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿಪ್ರಿನ್ಸ್ ಹ್ಯಾರಿ ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು. ‘ಪೀಪಲ್’ ವಿಭಾಗದಲ್ಲಿ ಇತರೆ 14 ಜನರ ಜತೆನಿತೇಶ್‌ ಸಹ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಪ್ರಶಸ್ತಿ ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ ₹1.74 ಲಕ್ಷ ನಗದು ಹೊಂದಿದೆ. ನಿತೇಶ್ ಅವರು ಕೊಯೊ ಲ್ಯಾಬ್ ಸಹ ಸಂಸ್ಥಾಪಕರಾಗಿದ್ದಾರೆ.

ಉಸಿರಾಟ ಸಮಸ್ಯೆಯಿಂದ ಬಳಲುವ,ಅವಧಿಪೂರ್ವ ಜನಿಸಿದ ಶಿಶುಗಳ ಜೀವ ಉಳಿಸಲುನಿತೇಶ್, ‘ಸಾನ್ಸ್’ ಉಪಕರಣವಿನ್ಯಾಸಗೊಳಿಸಿದ್ದಾರೆ. ನಾಲ್ಕು ವರ್ಷಗಳಿಂದ ಈ ಉಪಕರಣ ಅಭಿವೃದ್ಧಿಗೊಳಿಸಲಾಗುತ್ತಿತ್ತು.ನವಜಾತ ಶಿಶುಗಳಿಗೆ ಐಸಿಯು ಸೌಲಭ್ಯ ಇಲ್ಲದಿರುವದೇಶದ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಮೂರು ತಿಂಗಳಿಂದ ‘ಸಾನ್ಸ್’ ಬಳಕೆಯಾಗುತ್ತಿದೆ.

**

ತಕ್ಷಣವೇ ವೈದ್ಯಕೀಯ ನೆರವು ದೊರಕದೆ ಇರುವಂತಹ ಪರಿಸ್ಥಿತಿಯಿಂದ ಶಿಶುಗಳು ಸಾವಿಗೀಡಾಗುವುದನ್ನು ತಪ್ಪಿಸುವುದು ನಮ್ಮ ‌ಗುರಿ.
–ನಿತೇಶ್‌ ಕುಮಾರ್‌

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT