ಕೊಲಂಬೊ: ಕೊಲಂಬೊದಲ್ಲಿರುವ ಭಾರತದ ಹೈಕಮಿಷನರ್ ಸಂತೋಷ್ ಝಾ ಅವರು ಶ್ರೀಲಂಕಾದ ನೂತನ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಮತ್ತು ಪ್ರಧಾನಿ ಹರಿಣಿ ಅಮರಸೂರ್ಯ ಅವರನ್ನು ಬುಧವಾರ ಭೇಟಿ ಮಾಡಿದರು.
‘ಭಾರತ–ಶ್ರೀಲಂಕಾ ನಡುವಿನ ಪಾಲುದಾರಿಕೆಯ ಪ್ರಗತಿ ಹೆಚ್ಚಿಸುವ ಮತ್ತು ಉಭಯ ದೇಶಗಳ ನಡುವಿನ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಲಾಯಿತು’ ಎಂದು ಹೇಳಿಕೆ ತಿಳಿಸಿದೆ.
ಶ್ರೀಲಂಕಾದ ಪ್ರಧಾನಿ ಹರಿಣಿ ಅಮರಸೂರ್ಯ ಅವರ ಕಚೇರಿಯಲ್ಲಿ ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಂತೆ ಸಂತೋಷ್ ಝಾ ಸಲಹೆ ನೀಡಿದರು.
ಝಾ ಅವರು, ಶ್ರೀಲಂಕಾದ ನೂತನ ಅಧ್ಯಕ್ಷರಾದ ಬಳಿಕ ಅನುರಾ ಕುಮಾರ ದಿಸ್ಸನಾಯಕೆ ಅವರನ್ನು ಭೇಟಿ ಮಾಡಿದ ಮೊದಲ ವಿದೇಶಿ ರಾಯಭಾರಿಯಾಗಿದ್ದಾರೆ.