ದುಬೈ: ಭಾರತೀಯ ವ್ಯಕ್ತಿಯೊಬ್ಬರು ಪತ್ನಿ ಜತೆಗೂಡಿ ತನ್ನ ತಾಯಿಗೆ ದೈಹಿಕ ಹಿಂಸೆ ನೀಡಿ, ಹಸಿವಿನಿಂದ ಸಾಯುವಂತೆ ಮಾಡಿದ್ದಾರೆ ಎಂದು ದುಬೈ ಮಾಧ್ಯಮ ವರದಿ ಮಾಡಿದೆ.

ಬೆನ್ನು ಮೂಳೆ, ಪಕ್ಕೆಲಬು ಮುರಿತ, ಆಂತರಿಕ ರಕ್ತಸ್ರಾವದ ಜತೆಗೆ ದೇಹದ ಕೆಲ ಭಾಗ ಸುಟ್ಟಿದ್ದರಿಂದ ತೀವ್ರ ಬಳಲಿ ಆ ಮಹಿಳೆ ಮೃತಪಟ್ಟಿದ್ದಾರೆ. ಆರೋಪಿಗಳ ಗುರುತನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.

ಈ ಮಹಿಳೆಗೆ ಜುಲೈ 2018ರಿಂದ ಅಕ್ಟೋಬರ್ 2018ರವರೆಗೆ ಚಿತ್ರ ಹಿಂಸೆ ನೀಡಲಾಗಿದೆ. ಅವರು ಸಾಯುವ ವೇಳೆ ಕೇವಲ 29 ಕೆ.ಜಿಯಷ್ಟು ತೂಕವಿದ್ದರು ಎಂದು ವಿಧಿವಿಜ್ಞಾನ ವೈದ್ಯರು ತಿಳಿಸಿರುವುದಾಗಿ ವರದಿ ತಿಳಿಸಿದೆ.

ದಂಪತಿಯನ್ನು ವಶಕ್ಕೆ ಪಡೆದಿರುವ ಆಲ್ ಕ್ಯುಸೈಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆಸ್ಪತ್ರೆಯವರು ನೀಡಿರುವ ಪ್ರಮಾಣ ಪತ್ರದ ಪ್ರಕಾರ, ಆ ಮಹಿಳೆಯ ಸಾವು 2018ರ ಅಕ್ಟೋಬರ್ 31ರಂದು ಸಂಭವಿಸಿದೆ.

ಈ ಪ್ರಕರಣದ ವಿಚಾರಣೆಯನ್ನು ಜುಲೈ 3ಕ್ಕೆ ನ್ಯಾಯಾಲಯ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.