ಸಿಂಗಪುರ: ಸಿಂಗಪುರಕ್ಕೆ 58 ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಡಿ ಭಾರತೀಯ ಪ್ರಜೆಯೊಬ್ಬರಿಗೆ ಒಂದು ವರ್ಷ ನಾಲ್ಕು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಆಗಸ್ಟ್ 29ರಂದು ಅಬ್ದುಲ್ ಜಾಫರ್ ಹಾಜಿ ಅಲಿ (40) ಅವರು ಭಾರತದಿಂದ ಜಕಾರ್ತಕ್ಕೆ ತೆರಳುತ್ತಿದ್ದ ವೇಳೆ, ಮತ್ತೊಂದು ವಿಮಾನದಲ್ಲಿ ಪ್ರಯಾಣ ಮುಂದುವರಿಸುವುದಕ್ಕಾಗಿ ಸಿಂಗಪುರದ ಚಾಂಗಿ ವಿಮಾನನಿಲ್ದಾಣದಲ್ಲಿ ಇಳಿದಿದ್ದರು. ಈ ವೇಳೆ, ವಿಮಾನ ನಿಲ್ದಾಣ ಅಧಿಕಾರಿಗಳು ಅಲಿ ಅವರ ಬ್ಯಾಗ್ ಪರೀಕ್ಷಿಸಿದಾಗ, ಭಾರತೀಯ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದು ಪತ್ತೆಯಾಗಿತ್ತು.

58 ಆಮೆಗಳ ಪೈಕಿ ಒಂದು ಮೃತಪಟ್ಟಿದ್ದು, 22 ಆಮೆಗಳ ದೇಹ ಸ್ಥಿತಿ ಉತ್ತಮವಾಗಿಲ್ಲ ಎಂದು ಸ್ಟ್ರೈಟ್ಸ್ ಟೈಮ್ಸ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.