ಸಿಂಗಪುರ: 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 52 ವರ್ಷ ವಯಸ್ಸಿನ ಭಾರತದ ವ್ಯಕ್ತಿಯೊಬ್ಬರಿಗೆ ಸಿಂಗಪುರದಲ್ಲಿ 14 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ವ್ಯಕ್ತಿಯು ತನಗೆ ಪರಿಚಯವಿದ್ದ ಕುಟುಂಬದ ಬಾಲಕಿಗೆ 2022ರ ಅಕ್ಟೋಬರ್‌ನಲ್ಲಿ ಕಿರುಕುಳ ನೀಡಿದ್ದಾನೆ. ಉತ್ತರ ಸಿಂಗಪುರದ ಸೆಂಬಾವಾನ್ ಪ್ರದೇಶದ ಆಟದ ಮೈದಾನವೊಂದಕ್ಕೆ ಬಾಲಕಿಯನ್ನು ದ್ವಿಚಕ್ರವಾಹನದಲ್ಲಿ ಕರೆದೊಯ್ದಿದ್ದ ಆತ ಅಲ್ಲಿ ಆಕೆಗೆ ಕಿರುಕುಳ ನೀಡಿದ್ದಾನೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದರೆ ಐದು ವರ್ಷ ಜೈಲು ಶಿಕ್ಷೆ, ದಂಡ ಅಥವಾ ಬಡಿಗೆಯಿಂದ ಹೊಡೆಯುವ ಶಿಕ್ಷೆಯನ್ನು ಸಾಮಾನ್ಯವಾಗಿ ವಿಧಿಸಲಾಗುತ್ತದೆ. ಆದರೆ, ವ್ಯಕ್ತಿಗೆ 50ಕ್ಕಿಂತ ಹೆಚ್ಚಿನ ವಯಸ್ಸು ಆಗಿರುವುದರಿಂದ ಬಡಿಗೆಯಿಂದ ಹೊಡೆಯುವ ಶಿಕ್ಷೆ ನೀಡಿಲ್ಲ ಎನ್ನಲಾಗಿದೆ.