ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುಎಇ: ಮೊದಲ ಬಾರಿಗೆ ಬಾಲಕಿ ಯಕೃತ್ತಿನ ಕಸಿ

Published 10 ಜುಲೈ 2024, 15:45 IST
Last Updated 10 ಜುಲೈ 2024, 15:45 IST
ಅಕ್ಷರ ಗಾತ್ರ

ದುಬೈ: ಯುಎಇಯಲ್ಲಿ ಮೊದಲ ಬಾರಿಗೆ ಮಕ್ಕಳ ಯಕೃತ್ತಿನ ಕಸಿ ಮಾಡುವಲ್ಲಿ ಭಾರತೀಯ ಮೂಲದ ವೈದ್ಯರೊಬ್ಬರು ಯಶಸ್ವಿಯಾಗಿದ್ದಾರೆ.

ಶಸ್ತ್ರಚಿಕಿತ್ಸೆಗೊಳಗಾದ ನಾಲ್ಕು ವರ್ಷದ ಬಾಲಕಿಯೂ ಭಾರತೀಯಳೇ ಆಗಿದ್ದಾಳೆ. ಇದು ಜೀವಂತ ದಾನಿಯ ಬಾಲಕಿಗೆ ಮಾಡಲಾದ ಮೊದಲ ಯಕೃತ್ತಿನ ಕಸಿ ಆಗಿದೆ. ಬಾಲಕಿಯ ತಂದೆಯೇ ದಾನಿ.

ಬುರ್ಜಿಲ್ ಮೆಡಿಕಲ್ ಸಿಟಿಯ (ಬಿಎಂಸಿ) ಡಾ. ರೆಹಾನ್ ಸೈಫ್ ನೇತೃತ್ವದ ತಂಡದ ಪ್ರಯತ್ನದಿಂದ ಈ ಶಸ್ತ್ರಚಿಕಿತ್ಸೆ ನಡೆದಿದೆ .

ಅಪರೂಪದ ಆನುವಂಶಿಕ ಯಕೃತ್ತಿನ ಸಮಸ್ಯೆಯು ಬಾಲಕಿ ರಜಿಯಾ ಖಾನ್‌ಳಲ್ಲಿ ಪತ್ತೆಯಾಗಿತ್ತು. ಅಬುದಾಬಿಯಲ್ಲಿ ಜನಿಸಿದ್ದ ಅವಳ ಕುಟುಂಬದವರು ಯಾತನೆಯ ದಿನಗಳನ್ನು ಎದುರಿಸಿದ್ದರು. ಯಾಕೆಂದರೆ, ಮೂರು ವರ್ಷದ ಹಿಂದೆ ಇದೇ ಸಮಸ್ಯೆಯಿಂದ ಕುಟುಂಬವು ತನ್ನ ಮೊದಲ ಮಗಳನ್ನು ಕಳೆದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT