ನ್ಯೂಯಾರ್ಕ್: ತಮ್ಮ ಮನೆ ಸಮೀಪ ಪಾರ್ಕಿಂಗ್ ಮಾಡಿದ್ದ ಎಸ್‌ಯುವಿ ವಾಹನದಲ್ಲಿ ಕುಳಿತಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದಿದೆ.

ಮೇರಿಲ್ಯಾಂಡ್‌ನಲ್ಲಿ ಇದೇ ರೀತಿ ಭಾರತೀಯನಿಗೆ ಗುಂಡಿಕ್ಕಿ ಕೊಂದ ಘಟನೆ ನಡೆದ ಕೆಲವೇ ದಿನಗಳಲ್ಲಿ ಮತ್ತೊಂದು ಹತ್ಯೆಯಾಗಿದೆ.

ಮೃತ ವ್ಯಕ್ತಿಯನ್ನು ಸತ್ನಾಮ್ ಸಿಂಗ್ ಎಂದು ಗುರುತಿಸಲಾಗಿದ್ದು, ಸೌತ್ ಓಝೋನ್ ಪಾರ್ಕ್ ವಲಯದಲ್ಲಿ ಶನಿವಾರ ಮಧ್ಯಾಹ್ನ 3:46 ರ ಸುಮಾರಿಗೆ ಘಟನೆ ನಡೆದಿದೆ. ಕಾರಿನಲ್ಲಿ ಕುಳಿತಿದ್ದ ಸತ್ನಾಮ್ ಸಿಂಗ್ ಅವರ ಕುತ್ತಿಗೆ ಮತ್ತುದೇಹದ ಇತರೆ ಭಾಗಗಳಲ್ಲಿ ಗಾಯಗಳಾಗಿವೆ ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.

ಸ್ನೇಹಿತನಿಂದ ಪಡೆದಿದ್ದ ಕಪ್ಪು ಬಣ್ಣದ ಜೀಪ್ ರಾಂಗ್ಲರ್ ಸಹಾರಾದಲ್ಲಿ ಸಿಂಗ್ ಕುಳಿತಿದ್ದಾಗ ಬಂದೂಕುಧಾರಿಯೊಬ್ಬರು ಬಂದು ಗುಂಡು ಹಾರಿಸಿದ್ದಾನೆ ಎಂದು ನ್ಯೂಯಾರ್ಕ್ ಡೈಲಿ ನ್ಯೂಸ್ ವರದಿ ಮಾಡಿದೆ.

ಸಿಂಗ್ ಅವರನ್ನು ಜಮೈಕಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ವೈದ್ಯರು ಅವರು ಸಾವಿಗೀಡಾಗಿದ್ದಾರೆ ಎಂದು ಘೋಷಿಸಿದ್ದಾರೆ.

ಬಂದೂಕುಧಾರಿ ಕಾಲ್ನಡಿಗೆಯಲ್ಲಿ ಸಿಂಗ್ ಬಳಿಗೆ ಬಂದಿದ್ದಾನೆ ಎಂದು ಪೊಲೀಸರು ಹೇಳಿದ್ದರೂ, ಜೀಪ್ ಬಳಿ ಹಾದುಹೋದ ಬಿಳಿ ಬಣ್ಣದ ಸೆಡಾನ್‌ನಿಂದ ಶೂಟ್ ಮಾಡಲಾಗಿದೆ ಎಂದು ನೆರೆಹೊರೆಯವರು ಹೇಳಿದ್ದಾರೆ.

ಇದನ್ನೂ ಓದಿ..ಅಮೆರಿಕದಲ್ಲಿ ಗುಂಡಿನ ದಾಳಿ: ಭಾರತ ಮೂಲದ ಯುವಕ ಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.