ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಗಪುರ: ಪ್ರತಿಷ್ಠಿತ ಕಲಾ ಪುರಸ್ಕಾರಕ್ಕೆ ಮೀರಾ ಚಂದ್‌ ಭಾಜನ

Published 6 ಡಿಸೆಂಬರ್ 2023, 14:42 IST
Last Updated 6 ಡಿಸೆಂಬರ್ 2023, 14:42 IST
ಅಕ್ಷರ ಗಾತ್ರ

ಸಿಂಗಪುರ: ಭಾರತ ಮೂಲದ, ಲೇಖಕಿ ಮೀರಾ ಚಂದ್‌(81) ಅವರು ಸಿಂಗಪುರದ ಪ್ರತಿಷ್ಠಿತ ಕಲಾ ಪುರಸ್ಕಾರವಾದ ಕಲ್ಚರಲ್‌ ಮೆಡಾಲಿಯನ್‌ಗೆ ಭಾಜನರಾಗಿದ್ದಾರೆ.

ದೇಶದ ಕಲೆ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ನೀಡಿದ ಕೊಡುಗೆಗಾಗಿ ಮೀರಾ ಅವರಿಗೆ ಈ ಪುರಸ್ಕಾರ ಲಭಿಸಿದೆ. 

ಕಾದಂಬರಿಗಾರ್ತಿ ಸುಚೆನ್‌ ಕ್ರಿಸ್ಟೀನ್‌ ಲಿಮ್‌ ಹಾಗೂ ಮಲಯ ನೃತ್ಯ ಪ್ರವೀಣ ಒಸ್ಮಾನ್‌ ಅಬ್ದುಲ್‌ ಹಮೀದ್‌ ಅವರು ಸಹ ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಪ್ರಶಸ್ತಿಯು 80 ಸಾವಿರ ಸಿಂಗಪುರ ಡಾಲರ್ ಮೊತ್ತ (₹ 49,71,178) ಒಳಗೊಂಡಿದೆ.

ಸಿಂಗಪುರ ಅಧ್ಯಕ್ಷ ತರ್ಮನ್‌ ಷಣ್ಮುಗಂ ಅವರು ತಮ್ಮ ಅಧಿಕೃತ ನಿವಾಸ ಇಸ್ತಾನದಲ್ಲಿ ಮೂವರಿಗೆ ಮಂಗಳವಾರ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. 

1997ರಲ್ಲಿ ಹೋ ಮಿನ್‌ಫಾಂಗ್ ನಂತರ ಮೀರಾ ಹಾಗೂ ಸುಚೆನ್‌ ಅವರು ಈ ಪ್ರಶಸ್ತಿ ಪಡೆದ ಮೊದಲ ಇಂಗ್ಲಿಷ್ ಭಾಷೆಯ ಮಹಿಳಾ ಬರಹಗಾರರಾಗಿದ್ದಾರೆ. ಬಹುಸಂಸ್ಕೃತಿಗಳ ಸಮಾಜವನ್ನು ಚಿತ್ರಿಸುವುದಕ್ಕೆ ಮೀರಾ ಅವರು ಹೆಸರುವಾಸಿಯಾಗಿದ್ದಾರೆ. ಅವರ ‘ದಿ ಪೇಂಟೆಡ್ ಕೇಜ್‌’ (1986) ಕೃತಿ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗಾಗಿ ದೀರ್ಘಪಟ್ಟಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT