ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಲ್ಬರ್ನ್‌: ಭಾರತ ಮೂಲದ ಬಾಲಕನಿಗೆ ಇರಿತ

Published 30 ಜುಲೈ 2023, 15:48 IST
Last Updated 30 ಜುಲೈ 2023, 15:48 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಜನ್ಮದಿನದಂದೇ ಭಾರತ ಮೂಲದ 16 ವರ್ಷದ ಬಾಲಕನಿಗೆ ದುಷ್ಕರ್ಮಿಗಳ ಗುಂಪೊಂದು ಇರಿದಿದ್ದು, ಸುಲಿಗೆ ಮಾಡಿರುವ ಘಟನೆ ಮೆಲ್ಬರ್ನ್‌ನ ಟಾರ್ನೈಟ್‌ ಸಿಟಿಯಲ್ಲಿ ಗುರುವಾರ ನಡೆದಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಸುದ್ದಿ ವಾಹಿನಿ ವರದಿ ಮಾಡಿದೆ.

‘ರಿಯಾನ್‌ ಸಿಂಗ್‌ ಇರಿತಕ್ಕೊಳಗಾದ ಬಾಲಕ. ರಿಯಾನ್‌ನ ಇಬ್ಬರು ಸ್ನೇಹಿತರಿಗೂ ದುಷ್ಕರ್ಮಿಗಳು ಇರಿದಿದ್ದಾರೆ. ಘಟನೆ ನಡೆದಾಗ ಈ ಮೂವರು ಬಾಸ್ಕೆಟ್‌ ಬಾಲ್‌ ಆಟವಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ದುಷ್ಕರ್ಮಿಗಳ ಗುಂಪಿನವರು, ಮೊಬೈಲ್‌ ಫೋನ್‌ಗಳನ್ನು ಕೊಡುವಂತೆ ಕೇಳಿದ್ದಾರೆ. ಅಲ್ಲದೇ ರಿಯಾನ್‌ ಆಗ ತಾನೇ ಉಡುಗೊರೆಯಾಗಿ ಸ್ವೀಕರಿಸಿದ್ದ ಶೂಗಳನ್ನು ಕೊಡುವಂತೆ ದುಷ್ಕರ್ಮಿಗಳು ಆಗ್ರಹಿಸಿದ್ದರು’ ಎಂದು ವಿಕ್ಟೊರಿಯಾ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT