ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಯರಿಗೆ ಲೈಂಗಿಕ ಕಿರುಕುಳ: ಭಾರತ ಮೂಲದ ವ್ಯಕ್ತಿಗೆ ಜೈಲುಶಿಕ್ಷೆ

ಸಿಂಗಾಪುರ: ಅಶ್ಲೀಲ ಸಂದೇಶ ರವಾನೆ
Last Updated 14 ಆಗಸ್ಟ್ 2019, 13:59 IST
ಅಕ್ಷರ ಗಾತ್ರ

ಸಿಂಗಪುರ:ಬಾಲಕಿಯರಿಗೆ ಆನ್‌ಲೈನ್‌ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿ, ಅವರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಭಾರತ ಮೂಲದ ಎ.ಆರ್. ಅರುಣ್ ಪ್ರಶಾಂತ್ ಎಂಬಾತನಿಗೆ ಸಿಂಗಪುರ ನ್ಯಾಯಾಲಯ ಮಂಗಳವಾರ ಎರಡು ವರ್ಷಗಳ ಜೈಲುಶಿಕ್ಷೆ ಪ್ರಕಟಿಸಿದೆ.

ಆರೋಪಿ ಅರುಣ್ ಪ್ರಶಾಂತ್ ಸಿಂಗಪುರ ಪೊಲೀಸ್ ಇಲಾಖೆಯ ಮಾಜಿ ಉದ್ಯೋಗಿ. ಅರುಣ್ 12ರಿಂದ 15 ವರ್ಷದೊಳಗಿನ ಐವರು ಬಾಲಕಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದು, ಆತನ ಮೊಬೈಲ್‌ನಲ್ಲಿ 700ಕ್ಕೂ ಹೆಚ್ಚಿನಅಪರಿಚಿತ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸ್ಟೈಟ್ಸ್‌ ಟೈಮ್ಸ್ ವರದಿ ಮಾಡಿದೆ.

ಶಿಕ್ಷೆ ಪ್ರಕಟಿಸುವ ಮುನ್ನ ಜಿಲ್ಲಾ ನ್ಯಾಯಾಧೀಶ ಕೆಸ್ಲರ್ ಸೊಹ್ ಆರೋಪಿಗೆ ‘ನಿನ್ನ ಹೀನ ಕೃತ್ಯದಿಂದಾಗಿ ಐವರು ಬಾಲಕಿಯರ ಭವಿಷ್ಯಕ್ಕೆ ಗಂಭೀರವಾಗಿ ಹಾನಿಯಾಗಿದೆ ಎಂಬುದನ್ನು ಅರಿತುಕೊಂಡಿದ್ದೀಯಾ ಎಂದು ತಿಳಿಯುವೆ’ ಎಂದು ಹೇಳಿದರು.

ಐವರು ಬಾಲಕಿಯರಲ್ಲದೆ ಹಲವು ಮಹಿಳೆಯರಿಗೂ ಅಶ್ಲೀಲ ಸಂದೇಶ ರವಾನಿಸಿ, ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿರುವ ಒಟ್ಟು 21 ಆರೋಪಗಳು ಅರುಣ್ ಮೇಲಿವೆ. ನಿರುದ್ಯೋಗಿಯಾಗಿದ್ದ ಆರೋಪಿ, ಬಾಲಕಿಯರಿಗೆ ಅಶ್ಲೀಲ ಸಂದೇಶ ರವಾನಿಸಿ, ಅವರ ನಗ್ನ ಚಿತ್ರಗಳಿಗೆ ಬೇಡಿಕೆ ಇಡುತ್ತಿದ್ದ, ಸಂದೇಶಕ್ಕೆ ಸ್ಪಂದಿಸಿದವರಿಗೆ ಇನ್‌ಸ್ಟಾಗ್ರಾಂ ಮೂಲಕ ಪದೇ ಪದೇ ಪ್ರಚೋದನಕಾರಿ ಸಂದೇಶ ರವಾನಿಸಿ, ತನ್ನ ಮನೆಗೆ ಕರೆಸಿಕೊಂಡು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ಆರೋಪಿ ತನ್ನ ಕೆಲ ಕೃತ್ಯಗಳ ಬಗ್ಗೆ ಒಪ್ಪಿಕೊಂಡಿದ್ದು, ಮಹಿಳೆಯರ ಘನತೆಗೆ ಕುಂದು ತರುವ ಕೆಲಸದಲ್ಲಿ ತೊಡಗಿದ್ದ ಕುರಿತು ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿ ಬಾಲಕಿಯರಿಗೆ ಅಶ್ಲೀಲ ಸಂದೇಶ ರವಾನಿಸಿ ಅವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ. ಅಷ್ಟೇ ಅಲ್ಲ ತಾನು ಕರೆದಲ್ಲಿಗೆ ಬಾಲಕಿಯರು ಬರಲೇಬೇಕಂದು ಒತ್ತಾಯಿಸುತ್ತಿದ್ದ. 14 ವರ್ಷದ ಬಾಲಕಿಯೊಬ್ಬಳು ಅರುಣ್ ಮನೆಗೆ ಹೋದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಇದರಿಂದ ಆಘಾತಗೊಂಡಿದ್ದ ಆಕೆ, ಭಯಭೀತಳಾಗಿ ಕಾರಿನ ಚಾಲಕನಿಗೆ ಮಾಹಿತಿ ನೀಡಿದ್ದಳು. ಆಗ ಚಾಲಕ ಸಮೀಪದ ಪೊಲೀಸ್ ಠಾಣೆಯಲ್ಲಿ ಘಟನೆಯ ಬಗ್ಗೆ ದೂರು ದಾಖಲಿಸಿದ್ದ. ಈ ಬಗ್ಗೆ ತನಿಖೆ ಕೈಗೊಂಡಾಗ ಆರೋಪಿ ಅರುಣ್ ಹಲವು ಬಾಲಕಿಯರು ಮತ್ತುಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿದ್ದ ಪ್ರಕರಣಗಳು ಬೆಳಕಿಗೆ ಬಂದವು.

ಆರೋಪಿ ಪರ ವಕೀಲರು ‘ಆರೋಪಿ ಮೊದಲ ಬಾರಿಗೆ ತಪ್ಪೆಸಗಿದ್ದು, ಆತನಿಗೆ 20 ತಿಂಗಳ ಕಾಲ ಮಾತ್ರ ಜೈಲುಶಿಕ್ಷೆ ವಿಧಿಸಬೇಕೆಂದು‘ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.

ಸಿಂಗಪುರದಲ್ಲಿ ಬಾಲಕಿಯರೊಂದಿಗೆಲೈಂಗಿಕ ಕ್ರಿಯೆ ನಡೆಸಿದಲ್ಲಿ ಕನಿಷ್ಠ 10 ವರ್ಷಗಳ ಜೈಲುಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT