ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್: ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿಯ ಮೃತದೇಹ ಥೇಮ್ಸ್ ನದಿಯಲ್ಲಿ ಪತ್ತೆ

Published 1 ಡಿಸೆಂಬರ್ 2023, 11:46 IST
Last Updated 1 ಡಿಸೆಂಬರ್ 2023, 11:46 IST
ಅಕ್ಷರ ಗಾತ್ರ

ಲಂಡನ್: ಕಳೆದ ತಿಂಗಳು ನಾಪತ್ತೆಯಾಗಿದ್ದ ಭಾರತ ಮೂಲದ 23 ವರ್ಷದ ವಿದ್ಯಾರ್ಥಿ ಇಲ್ಲಿನ ಥೇಮ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮೃತ ವಿದ್ಯಾರ್ಥಿಯನ್ನು ಮಿತ್ಕೂರ್ ಪಟೇಲ್ ಎಂದು ಗುರುತಿಸಲಾಗಿದ್ದು, ಸೆಪ್ಟೆಂಬರ್‌ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ಬಂದಿದ್ದರು. ನವೆಂಬರ್ 17ರಿಂದ ಆತ ಕಾಣೆಯಾಗಿದ್ದ.

ಪೂರ್ವ ಲಂಡನ್‌ನ ಕ್ಯಾನರಿ ವಾರ್ಫ್ ಪ್ರದೇಶದ ಬಳಿಯ ಥೇಮ್ಸ್ ನದಿಯಲ್ಲಿ ಪತ್ತೆಯಾದ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ. ಸಾವು ಸಂಶಯಾಸ್ಪದವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಿತ್ಕೂರ್ ಪಟೇಲ್ ಅವರ ಸಂಬಂಧಿ ಪಾರ್ಥ ಪಟೇಲ್ ದೇಣಿಗೆ ಸಂಗ್ರಹಣೆ ಆರಂಭಿಸಿದ್ದು, ಈವರೆಗೆ ಅವರು 4,000 ಪೌಂಡ್ ದೇಣಿಗೆ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

‘ರೈತಾಪಿ ಕುಟುಂಬದಿಂದ ಬಂದಿರುವ ಪಟೇಲ್, ನವೆಂಬರ್ 17, 2023ರಿಂದ ಕಾಣೆಯಾಗಿದ್ದಾರೆ. ಈಗ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇದು ಅತ್ಯಂತ ದುಃಖಕರ ವಿಷಯ. ದೇಣಿಗೆ ಸಂಗ್ರಹಿಸಿ ಅವರ ಕುಟುಂಬಕ್ಕೆ ನೆರವು ನೀಡಲು ಇಚ್ಛಿಸುತ್ತಿದ್ದೇನೆ’ ಎಂದು ಪಾರ್ಥ ಪಟೇಲ್ ಹೇಳಿದ್ದಾರೆ.

ಈವ್ನಿಂಗ್ ಸ್ಟ್ಯಾಂಡರ್ಡ್ ಪತ್ರಿಕೆಯ ಪ್ರಕಾರ, ವಿದ್ಯಾರ್ಥಿಯು ನವೆಂಬರ್ 20ರಂದು ಶೆಫೀಲ್ಡ್ ಹಾಲಮ್ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಅಮೆಜಾನ್‌ನಲ್ಲಿ ಅರೆಕಾಲಿಕ ಕೆಲಸವನ್ನು ಪ್ರಾರಂಭಿಸಲು ಶೇಫೀಲ್ಡ್‌ಗೆ ತೆರಳಬೇಕಿತ್ತು. ಆದರೆ, ಲಂಡನ್‌ನಲ್ಲಿ ದೈನಂದಿನ ವಾಕಿಂಗ್‌ಗೆ ತೆರಳಿದ್ದ ಪಟೇಲ್ ಹಿಂದಿರುಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT