ಮ್ಯಾಡ್ರಿಡ್: ಕ್ರೀಡೆ ಹಾಗೂ ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತ ಹಾಗೂ ಸ್ಪೇನ್ ಎರಡು ಒಪ್ಪಂದಗಳಿಗೆ ಸಹಿ ಹಾಕಿರುವುದಾಗಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದರು.

ಸ್ಪೇನ್ನ ವಿದೇಶಾಂಗ ವ್ಯವಹಾರಗಳ ಸಚಿವ ಜೋಸ್ ಮ್ಯಾನ್ಯುಯಲ್ ಅಲ್ಬರೆಸ್ ಅವರೊಟ್ಟಿಗೆ ಸಭೆ ನಡೆಸಿದ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈಂಶಕರ್, ‘ಭಾರತದಲ್ಲಿ ಸ್ಪೇನ್ನ 230 ಕಂಪನಿಗಳಿವೆ. ಭಾರತದ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಅವೆಲ್ಲ ಕೈಜೋಡಿಸಲು ಸ್ವಾಗತಿಸುತ್ತೇನೆ’ ಎಂದು ಹೇಳಿದರು.

2026ನೇ ಇಸವಿಯು ಉಭಯ ದೇಶಗಳಿಗೆ ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ
ಮುಖ್ಯವಾದುದಾಗಿದೆ. ರಕ್ಷಣೆ, ರೈಲ್ವೆ, ನಗರಾಭಿವೃದ್ಧಿ ತಂತ್ರಜ್ಞಾನ, ಪರಿಸರಸ್ನೇಹಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ
ಉಭಯ ದೇಶಗಳಿಗೆ ಒಟ್ಟಾಗಿ ಕೆಲಸ ಮಾಡುವ ಅವಕಾಶಗಳಿವೆ ಎಂದೂ ಹೇಳಿದರು.

ಸ್ಪೇನ್ ಮತ್ತು ಐರೋಪ್ಯ ಒಕ್ಕೂಟದ ಜೊತೆಗಿನ ಭಾರತದ ಬಾಂಧವ್ಯವನ್ನು ‘ಈ ಪ್ರಕ್ಷುಬ್ಧ ಸಂದರ್ಭದಲ್ಲಿ ಸ್ಥಿರಗೊಳಿಸ ಬೇಕಾದ ಅಗತ್ಯವಿದೆ’ ಎಂದೂ ಅವರು ಪ್ರತಿಪಾದಿಸಿದರು.

ಮ್ಯಾಡ್ರಿಡ್ನಲ್ಲಿ ನಡೆಯುತ್ತಿರುವ ರಾಯಭಾರಿಗಳ 9ನೇ ವಾರ್ಷಿಕ ಸಮ್ಮೇಳನದಲ್ಲಿ ಅವರು ಈ ವಿಷಯವನ್ನು ಮಂಡಿಸಿದರು.

ವಿದೇಶಾಂಗ ಸಚಿವರಾದ ನಂತರ ಸ್ಪೇನ್ಗೆ ಮೊದಲ ಬಾರಿ ಭೇಟಿ ನೀಡಿರುವ ಜೈಶಂಕರ್, ಸೋಮವಾರದಿಂದ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಸ್ಪೇನ್ ಅಧ್ಯಕ್ಷ ಪೆದ್ರೊ ಭಾರತಕ್ಕೆ ಭೇಟಿ ನೀಡಿದ ಎರಡೂವರೆ ತಿಂಗಳ ನಂತರ ಜೈಶಂಕರ್ ಇಲ್ಲಿಗೆ ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.