ಲಂಡನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೋಮವಾರ ಭೇಟಿಯಾಗಿ, ಇಂಡೊ–ಪೆಸಿಫಿಕ್ ವಲಯ ಮತ್ತು ಉಕ್ರೇನ್–ರಷ್ಯಾ ಯುದ್ಧ ಕುರಿತು ಚರ್ಚಿಸಿದರು.

ಲಿಥುವೇನಿಯಾದಲ್ಲಿ ನಡೆಯಲಿರುವ ನ್ಯಾಟೊ ಶೃಂಗಸಭೆಯಲ್ಲಿ ಭಾಗವಹಿಸಲು ಬೈಡನ್ ಆಗಮಿಸಿದ್ದು, ರಾಜ 3ನೇ ಚಾರ್ಲ್ಸ್ ಅವರು ವಿಂಡ್ಸರ್ ಕ್ಯಾಸ್ಟಲ್‌ನಲ್ಲಿ ಬರಮಾಡಿಕೊಂಡರು. ಅಮೆರಿಕ –ಬ್ರಿಟನ್ ಬಾಂಧವ್ಯ ಬಂಡೆಯಂತೆ ದೃಢವಾಗಿದೆ ಎಂದು ರಾಜ ಶ್ಲಾಘಿಸಿದರು.

ಉಕ್ರೇನ್‌ನ ಬೆಂಬಲ ನೀಡುವುದು ಮತ್ತು ಅಮೆರಿಕ –ಬ್ರಿಟನ್ ಬಾಂಧವ್ಯ ಬಲಪಡಿಸಲು ಉಭಯ ಮುಖಂಡರು ಒಪ್ಪಿದ್ದಾರೆ ಎಂದು ಡೌನಿಂಗ್ ಸ್ಟ್ರೀಟ್‌ನ ವಕ್ತಾರರು ತಿಳಿಸಿದರು.

‘ರಕ್ಷಣಾತ್ಮಕ ಕ್ರಮಗಳು ಹಾಗೂ ಅಂತರರಾಷ್ಟ್ರೀಯ ಭಾಗಿದಾರರ ಜೊತೆಗೆ ದೀರ್ಘಾವಧಿಯಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿ ಪಾಲುದಾರಿಕೆ ಹೊಂದುವುದು ಅಗತ್ಯ. ಯುದ್ಧದಲ್ಲಿ ಜಯಗಳಿಸಲು ಉಕ್ರೇನ್‌ಗೆ ಬೆಂಬಲ ಅಗತ್ಯವಾಗಿದೆ ಎಂದು ಬೈಡನ್ ಪ್ರತಿಪಾದಿಸಿದರು. ಇರಾನ್‌ಗೆ ಸಂಬಂಧಿಸಿ ಇಂಡೊ–ಪೆಸಿಫಿಕ್ ವಲಯದ ಭೌಗೋಳಿಕ, ರಾಜಕೀಯ ಸ್ಥಿತಿ ಕುರಿತು ಉಭಯ ಮುಖಂಡರು ಚರ್ಚಿಸಿದರು‘ ಎಂದು ತಿಳಿಸಿದರು.

ಡೌನಿಂಗ್ ಸ್ಟ್ರೀಟ್‌ಗೆ ಇದು ಬೈಡನ್ ಅವರ ಮೊದಲ ಹಾಗೂ ಪ್ರಧಾನಿಯಾದ ಬಳಿಕ ರಿಷಿ ಸುನಕ್ ಅವರೊಂದಿಗೆ ಆರನೇ ಭೇಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.