ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗಿನಲ್ಲಿ ಸಿಲುಕಿರುವ ಭಾರತೀಯರ ಬಿಡುಗಡೆಗೆ ಇರಾನ್‌ನಿಂದ ಅವಕಾಶ

Published 27 ಏಪ್ರಿಲ್ 2024, 15:43 IST
Last Updated 27 ಏಪ್ರಿಲ್ 2024, 15:43 IST
ಅಕ್ಷರ ಗಾತ್ರ

ದುಬೈ: ಇರಾನ್‌ ಸೇನಾಪಡೆಗಳು ವಶಪಡಿಸಿಕೊಂಡಿರುವ ಪೋರ್ಚುಗೀಸ್‌ ದ್ವಜ ಹೊತ್ತಿದ್ದ ಇಸ್ರೇಲ್‌ನ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲು ಕಾನ್ಸಲರ್‌ ಸೇವೆಯನ್ನು ಬಳಸಿಕೊಳ್ಳಲು ಅಲ್ಲಿಯ ವಿದೇಶಿ ರಾಯಭಾರ ಕಚೇರಿಗಳಿಗೆ ಅವಕಾಶ ನೀಡಲಾಗಿದೆ ಎಂದು ಇರಾನ್‌ ತಿಳಿಸಿದೆ.

ಇದರಿಂದಾಗಿ, ಇರಾನ್‌ನಲ್ಲಿ ಸಿಲುಕಿರುವ 17 ಮಂದಿ ಭಾರತೀಯ ಸಿಬ್ಬಂದಿ ಆದಷ್ಟು ಬೇಗ  ಬಿಡುಗಡೆಯಾಗಲಿದ್ದಾರೆ ಎಂಬ ಭರವಸೆ ಮೂಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಪೋರ್ಚುಗಲ್‌ನ ಹೊಸ ವಿದೇಶಾಂಗ ವ್ಯವಹಾರಗಳ ಸಚಿವರು ಇರಾನ್‌ ವಿದೇಶಾಂಗ ವ್ಯವಹಾರಗಳ ಸಚಿವ ಹೊಸೇನ್‌ ಅಮಿರಾಬ್‌ ದೊಲ್ಲಾಹಿಯನ್‌ ಜೊತೆ ದೂರವಾಣಿ ಸಂಭಾಷಣೆ ನಡೆಸಿ,ಇಸ್ರೇಲ್‌ ಹಾಗೂ ಇರಾನ್‌ ನಡುವಣ ಸಂಘರ್ಷದ ಕುರಿತು ತಮ್ಮ ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಇದೇ ವೇಳೆ, ಇರಾನ್‌ ವಶಪಡಿಸಿಕೊಂಡಿರುವ ಇಸ್ರೇಲ್‌ ಸರಕು ಹಡಗಿನ ಕುರಿತೂ ಚರ್ಚಿಸಿದರು.

‘ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆಗೊಳಿಸುವುದನ್ನು ಮಾನವೀಯ ನೆಲೆಯಲ್ಲಿ ನೋಡಲಾಗುವುದು. ಟೆಹರಾನ್‌ನಲ್ಲಿಯ ರಾಯಭಾರಿಗಳು ತಮ್ಮ ದೇಶದ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲು ಕಾನ್ಸಲರ್‌ ಸೇವೆಯನ್ನು ಬಳಸಿಕೊಳ್ಳಬಹುದು’ ಎಂದು ಹೊಸೇನ್‌ ಈ ವೇಳೆ ಹೇಳಿದರು.

ಇಸ್ರೇಲ್‌ಗೆ ಸೇರಿದ್ದ ಹಡಗನ್ನು ಏಪ್ರಿಲ್ 13ರಂದು ಇರಾನ್‌ ವಶಪಡಿಸಿಕೊಂಡಿತ್ತು. ಅದರಲ್ಲಿ 25 ಸಿಬ್ಬಂದಿ ಇದ್ದರು. ಅವರಲ್ಲಿ 17 ಮಂದಿ ಭಾರತೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT