ಬಾಗ್ದಾದ್: ಬಾಗ್ದಾದ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅದಕ್ಕೆ ಹೊಂದಿಕೊಂಡು ಇರುವ ಸೇನಾ ನೆಲೆ ಸಮೀಪ ಕನಿಷ್ಠ ಮೂರು ರಾಕೆಟ್‌ಗಳಿಂದ ಶುಕ್ರವಾರ ದಾಳಿ ನಡೆದಿದೆ ಎಂದು ಇರಾಕ್ ಅಧಿಕಾರಿಗಳು ಹೇಳಿದ್ದಾರೆ.

ಸೇನಾ ನೆಲೆಯಲ್ಲಿ ಅಮೆರಿಕ ಹಾಗೂ ಮಿತ್ರರಾಷ್ಟ್ರಗಳ ಯೋಧರು ಹಾಗೂ ಮಿಲಿಟರಿ ಸಲಹೆಗಾರರು ಇದ್ದು, ಸದ್ಯ ಬಳಕೆ ಮಾಡದ ವಾಣಿಜ್ಯ ವಿಮಾನವೊಂದು ಈ ದಾಳಿಯಲ್ಲಿ ಹಾನಿಗೊಳಗಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಬೆಳಗಿನ ಅವಧಿಯಲ್ಲಿ ರಾಕೆಟ್‌ಗಳಿಂದ ದಾಳಿ ನಡೆಸಲಾಗಿದೆ. ವಿಮಾನ ನಿಲ್ದಾಣದ ನಾಗರಿಕ ಹಾಗೂ ಮಿಲಿಟರಿ ಪ್ರದೇಶಗಳ ನಡುವಿನ ಜಾಗಕ್ಕೆ ರಾಕೆಟ್‌ಗಳು ಅಪ್ಪಳಿಸಿವೆ’ ಎಂದೂ ಅಧಿಕಾರಿಗಳು ಹೇಳಿದ್ದಾರೆ.

‘ನಾಗರಿಕ ವಿಮಾನಗಳ ಹಾರಾಟಕ್ಕೆ ಈ ಘಟನೆಯಿಂದ ಯಾವುದೇ ತೊಂದರೆಯಾಗಿಲ್ಲ’ ಎಂದು ಇರಾಕಿ ಏರವೇಸ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.