ವಾಷಿಂಗ್ಟನ್: ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದಕ್ಕೆ ಬಂದಿವೆ ಎಂದು ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ. ಈ ಒಪ್ಪಂದವು ಗಾಜಾದಲ್ಲಿನ ಯುದ್ಧವನ್ನು ನಿಲ್ಲಿಸುತ್ತದೆ ಎಂದು ಹೇಳಿದ್ದಾರೆ.

ಅಮೆರಿಕ, ಈಜಿಪ್ಟ್ ಮತ್ತು ಕತಾರ್ ದೇಶಗಳ ಹಲವು ತಿಂಗಳ ನಿರಂತರ ರಾಜತಾಂತ್ರಿಕ ಪ್ರಯತ್ನದ ನಂತರ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದಕ್ಕೆ ಬಂದಿವೆ ಎಂದು ಬೈಡನ್ ಘೋಷಿಸಿದ್ದಾರೆ. ಈ ಒಪ್ಪಂದವನ್ನು ಬೈಡನ್ ಆಡಳಿತದ ಕೊನೆಯ ವಿದೇಶಾಂಗ ನೀತಿ ಸಾಧನೆಯಾಗಿದೆ. ಜನವರಿ 20ರಂದು ಅಮೆರಿಕ ಅಧ್ಯಕ್ಷರಾಗಿ ಬೈಡನ್ ಅವಧಿ ಅಂತ್ಯಗೊಳ್ಳಲಿದೆ.

‘ಈ ಒಪ್ಪಂದವು ಗಾಜಾದಲ್ಲಿನ ಯುದ್ಧವನ್ನು ನಿಲ್ಲಿಸುತ್ತದೆ. ಪ್ಯಾಲೆಸ್ಟೇನ್ ನಾಗರಿಕರಿಗೆ ಮಾನವೀಯ ನೆರವು ಒದಗಿಸುತ್ತದೆ. 15 ತಿಂಗಳುಗಳಿಗಿಂತ ಹೆಚ್ಚು ಕಾಲ ಸೆರೆಯಲ್ಲಿದ್ದ ಒತ್ತೆಯಾಳುಗಳನ್ನು ಅವರ ಕುಟುಂಬಗಳೊಂದಿಗೆ ಸೇರಿಸುತ್ತದೆ’ಎಂದು ಬೈಡನ್ ಹೇಳಿದ್ದಾರೆ.

ಯುದ್ಧ ವಿರಾಮ ಒಪ್ಪಂದವನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಿಸಿದ್ದಾರೆ. ಜನವರಿ 20ರಂದು ಅಮೆರಿಕದ 47ನೇ ಅಧ್ಯಕ್ಷರಾಗಿ 78 ವರ್ಷದ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಲಿದ್ದಾರೆ.

‘ಈ ಕದನ ವಿರಾಮ ಒಪ್ಪಂದವು ನವೆಂಬರ್ನಲ್ಲಿ ನಮ್ಮ ಐತಿಹಾಸಿಕ ವಿಜಯದ ಕಾರಣದಿಂದಾಗಿ ಆಗಿದೆ. ನನ್ನ ಮುಂಬರುವ ಆಡಳಿತವು ಶಾಂತಿ ಮತ್ತು ಎಲ್ಲ ಅಮೆರಿಕನ್ನರು ಹಾಗೂ ನಮ್ಮ ಮಿತ್ರರಾಷ್ಟ್ರಗಳ ಸುರಕ್ಷತೆಯನ್ನು ಬಯಸುತ್ತದೆ ಎಂದು ಇಡೀ ಜಗತ್ತಿಗೆ ಸಂಕೇತಿಸಿದೆ. ನಾನು ರೋಮಾಂಚನಗೊಂಡಿದ್ದೇನೆ. ಇಸ್ರೇಲಿ ಒತ್ತೆಯಾಳುಗಳು ತಮ್ಮ ಕುಟುಂಬಗಳು ಮತ್ತು ಪ್ರೀತಿಪಾತ್ರರ ಜೊತೆ ಮತ್ತೆ ಒಂದಾಗಲು ಮನೆಗೆ ಹಿಂದಿರುಗುತ್ತಿದ್ದಾರೆ’ಎಂದು ಟ್ರಂಪ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.