ಜೆರುಸಲೇಮ್/ದೋಹಾ: ‘ಕತಾರ್ನ ಮೇಲೆ ಮಂಗಳವಾರ ನಡೆದ ವೈಮಾನಿಕ ದಾಳಿಯಲ್ಲಿ, ಹಮಾಸ್ ನಾಯಕರು ಹತ್ಯೆಯಾಗಿರದಿದ್ದಲ್ಲಿ, ಮುಂದಿನ ಬಾರಿ ನಡೆಯುವ ದಾಳಿಯಲ್ಲಿ ನಾವು ಯಶಸ್ಸು ಸಾಧಿಸುತ್ತೇವೆ’ ಎಂದು ಅಮೆರಿಕದಲ್ಲಿನ ಇಸ್ರೇಲ್ ರಾಯಭಾರಿ ಯೆಚಿಯಲ್ ಲೀಟೆರ್ ಹೇಳಿದ್ದಾರೆ.

ಗಾಜಾದಲ್ಲಿ ನಡೆಯುತ್ತಿರುವ ಕದನವಿರಾಮ ಪ್ರಯತ್ನಗಳಿಗೆ ಈ ದಾಳಿ ಅಡ್ಡಿಯಾಗಲಿದೆ ಎಂಬ ಆತಂಕದ ನಡುವೆಯೇ, ಅವರು ಈ ಹೇಳಿಕೆ ನೀಡಿದ್ದಾರೆ.

‘ಸದ್ಯ ನಾವು ಕೆಲವರ ಟೀಕೆಗೆ ಗುರಿಯಾಗಿರಬಹುದು. ಉತ್ತಮ ಉದ್ದೇಶಕ್ಕಾಗಿ ಇಸ್ರೇಲ್ ಬದಲಾವಣೆ ಬಯಸುತ್ತಿದೆ’ ಎಂದು ‘ಫಾಕ್ಸ್ ನ್ಯೂಸ್’ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಕತಾರ್ನಲ್ಲಿ ನೆಲೆಸಿರುವ ಹಮಾಸ್ ನಾಯಕರನ್ನು ಗುರಿಯಾಗಿಸಿ ರಾಜಧಾನಿ ದೋಹಾ ಮೇಲೆ ಇಸ್ರೇಲ್ ಪಡೆಗಳು ಮಂಗಳವಾರ ವೈಮಾನಿಕ ದಾಳಿ ನಡೆಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.