ಚೆರ್ನೋಬಿಲ್ ರೀತಿಯ ದುರಂತ: ರಷ್ಯಾ ಎಚ್ಚರಿಕೆ
ಸೇಂಟ್ ಪೀಟರ್ಸ್‌ಬರ್ಗ್: ಇರಾನ್‌ನ ಬುಶೆಹ್ರ್ ಅಣು ಸ್ಥಾವರದ ಮೇಲೆ ಇಸ್ರೇಲ್ ದಾಳಿ ನಡೆಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಷ್ಯಾ ಇಂತಹ ಕ್ರಮ ಚೆರ್ನೋಬಿಲ್ ರೀತಿಯ ದುರಂತಕ್ಕೆ ಕಾರಣವಾಗಲಿದೆ ಎಂದು ಗುರುವಾರ ಎಚ್ಚರಿಸಿದೆ. ಇರಾನ್ ಮೇಲಿನ ದಾಳಿಯನ್ನು ನಿಲ್ಲಿಸುವಂತೆಯೂ ಆಗ್ರಹಿಸಿದೆ. ಬುಶೆಹ್ರ್‌ನಲ್ಲಿನ ಈ ಸೌಲಭ್ಯವು ಸದ್ಯ ಇರಾನ್‌ನಲ್ಲಿ ಸಕ್ರಿಯವಾಗಿರುವ ಏಕೈಕ ಅಣುಸ್ಥಾವರವಾಗಿದೆ. ಇದನ್ನು ರಷ್ಯಾ ನಿರ್ಮಿಸುತ್ತಿದೆ. ‘ಬುಶೆಹ್ರ್ ಅಣುಸ್ಥಾವರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಷ್ಯಾ ತಂತ್ರಜ್ಞರ ಸುರಕ್ಷತೆ ಕುರಿತು ಆತಂಕ ಮೂಡಿದೆ’ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ವಕ್ತಾರೆ ಮಾರಿಯಾ ಝಖರೋವಾ ಹೇಳಿದ್ದಾರೆ.