ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ನಲ್ಲಿ ಕಾರ್ಮಿಕರ ಕೊರತೆ: ಭಾರತಕ್ಕೆ ಮೊರೆ

ಕಾರ್ಮಿಕರ ಆಯ್ಕೆಗಾಗಿ ಭಾರತಕ್ಕೆ ಇಸ್ರೇಲ್‌ನ ತಂಡ: ದೆಹಲಿ, ಚೆನ್ನೈನಲ್ಲಿ ನೇಮಕಾತಿ ಪ್ರಕ್ರಿಯೆ
Published 20 ಡಿಸೆಂಬರ್ 2023, 16:02 IST
Last Updated 20 ಡಿಸೆಂಬರ್ 2023, 16:02 IST
ಅಕ್ಷರ ಗಾತ್ರ

ಜೆರುಸೆಲೇಂ: ಕಾರ್ಮಿಕರ ತೀವ್ರ ಕೊರತೆ ಎದುರಿಸುತ್ತಿರುವ ಇಸ್ರೇಲ್‌ ಕಟ್ಟಡ ನಿರ್ಮಾಣ ಉದ್ಯಮವು ಈಗ ಭಾರತಕ್ಕೆ ಮೊರೆ ಹೋಗಿದೆ.

ಸಾವಿರಾರು ಕಾರ್ಮಿಕರನ್ನು ಭಾರತದಿಂದ ಇಸ್ರೇಲ್‌ಗೆ ಕರೆತರಲಿಕ್ಕಾಗಿಯೇ ಆಯ್ಕೆದಾರರ ತಂಡವೊಂದು ಕಳೆದ ವಾರ ಭಾರತಕ್ಕೆ ಭೇಟಿ ನೀಡಿತ್ತು. ಮುಂದಿನ ವಾರ ಮತ್ತೊಂದು ತಂಡ ಭೇಟಿ ನೀಡಲಿದೆ ಎಂದು ಇಸ್ರೇಲ್‌ ಬಿಲ್ಡರ್ಸ್‌ ಅಸೋಸಿಯೇಷನ್‌ ಬುಧವಾರ ತಿಳಿಸಿದೆ.

‘ದೆಹಲಿ, ಚೆನ್ನೈನಲ್ಲಿ ಡಿ.27ರಂದು ನೇಮಕಾತಿ ಪ್ರಕ್ರಿಯೆ ಆರಂಭಿಸುತ್ತೇವೆ. 10 ಸಾವಿರ ಕಾರ್ಮಿಕರ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. ಈ ಸಂಖ್ಯೆ 30 ಸಾವಿರದ ತನಕವೂ ಹೆಚ್ಚಬಹುದು. 10–15 ದಿನ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಇದು ಹಲವು ತಿಂಗಳವರೆಗೂ ಮುಂದುವರಿಯಬಹುದು’ ಎಂದು ಇಸ್ರೇಲ್‌ ಬಿಲ್ಡರ್ಸ್‌ ಅಸೋಸಿಯೇಷನ್‌ನ (ಐಬಿಎ) ವಕ್ತಾರರೂ ಆಗಿರುವ ಉಪ ಮಹಾನಿರ್ದೇಶಕ ಶೇ ಪೌಜ್ನರ್‌ ತಿಳಿಸಿದ್ದಾರೆ.

’ಕಾರ್ಮಿಕರ ಸಮಸ್ಯೆಗಳು ಮತ್ತು ಆಯ್ಕೆ ತಂಡವನ್ನು ನಿಭಾಯಿಸುವ ಐಬಿಎ ವಿಭಾಗದ ಮುಖ್ಯಸ್ಥ ಇಜಾಕ್‌ ಗುರ್ವಿಟ್‌ ನೇತೃತ್ವದ ನಿಯೋಗ ಕಳೆದ ವಾರ ಭಾರತದಲ್ಲಿತ್ತು. ಮುಂದಿನ ವಾರ ಐಬಿಎ ತಂಡದ ಇತರ ಸದಸ್ಯರೊಂದಿಗೆ ಸಿಇಒ ಇಗಲ್ ಸ್ಲೋವಿಕ್‌ ಕಾರ್ಮಿಕರ ನೇಮಕಾತಿಗಾಗಿಯೇ ಭೇಟಿ ನೀಡಲಿದ್ದಾರೆ. ಈ ನಿಯೋಗದೊಂದಿಗೆ ನಿರ್ಮಾಣ ಮತ್ತು ವಸತಿ ಸಚಿವಾಲಯದ ಮಹಾನಿರ್ದೇಶಕ ಯೆಹುದಾ ಮೊರ್ಗೆನ್‌ಸ್ಟೆರ್ನ್ ಕೂಡ ಇರಲಿದ್ದಾರೆ ಎಂದು ಅವರು ಹೇಳಿದರು.

‘ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ, ಭಾರತದಿಂದ ಕಾರ್ಮಿಕರನ್ನು ಕರೆತರುವ ಕುರಿತಂತೆ ಚರ್ಚಿಸಿದ್ದಾರೆ’ ಎಂದು ಇಸ್ರೇಲ್‌ ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT