ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel–Hamas war: ಸರ್ವಪಕ್ಷ ಸರ್ಕಾರ ರಚಿಸಿದ ಇಸ್ರೇಲ್

Published 11 ಅಕ್ಟೋಬರ್ 2023, 16:34 IST
Last Updated 11 ಅಕ್ಟೋಬರ್ 2023, 16:34 IST
ಅಕ್ಷರ ಗಾತ್ರ

ಜೆರುಸಲೇಂ: ಹಮಾಸ್ ಬಂಡುಕೋರರ ವಿರುದ್ಧದ ಯುದ್ಧದ ಅವಧಿಯಲ್ಲಿ ಮಿಲಿಟರಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಲು ಸರ್ವಪಕ್ಷ ಸರ್ಕಾರವನ್ನು ರಚಿಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ವಿರೋಧ ಪಕ್ಷದ ನಾಯಕ ಬೆನ್ನಿ ಗೆಂಟ್ಜ್‌ ಸಮ್ಮತಿ ಸೂಚಿಸಿದ್ದಾರೆ. 

ಇಸ್ರೇಲ್‌ನ ನ್ಯಾಷನಲ್ ಯೂನಿಟಿ ಪಾರ್ಟಿಯ ನಾಯಕ ಬೆನ್ನಿ ಗೆಂಟ್ಜ್‌ ಅವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಇದು ನೆತನ್ಯಾಹು ಅವರೊಂದಿಗಿನ ಜಂಟಿ ಹೇಳಿಕೆ ಎಂದು ಗೆಂಟ್ಜ್‌ ತಿಳಿಸಿದ್ದಾರೆ.

ಐವರು ಸದಸ್ಯರ ಯುದ್ಧ ನಿರ್ವಹಣಾ ಸಂಪುಟವನ್ನು ರಚಿಸುವುದಾಗಿ ಅವರು ಹೇಳಿದ್ದಾರೆ. ಕಾರ್ಯಾಚರಣೆ ನಡೆಯುತ್ತಿರುವಷ್ಟು ಕಾಲ ಈ ಸರ್ಕಾರವು ಯುದ್ಧಕ್ಕೆ ಸಂಬಂಧಿಸದೆ ಇರುವ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಹಾಗೂ ಯುದ್ಧಕ್ಕೆ ಸಂಬಂಧಿಸಿರದ ಶಾಸನ ರೂಪಿಸುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿರೋಧ ಪಕ್ಷದ ನಾಯಕ ಯಾಯಿರ್ ಲಾ‍‍ಪಿಡ್ ಅವರಿಗೂ ಸರ್ಕಾರ ಸೇರುವಂತೆ ಆಹ್ವಾನ ನೀಡಲಾಗಿದೆ. ಆದರೆ ಅವರು ಇದುವರೆಗೆ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT