ಜೆರುಸಲೇಂ: ಗಾಜಾಪಟ್ಟಿಯಲ್ಲಿ ಹೋರಾಟ ನಡೆಸುತ್ತಿದ್ದ 8 ಯೋಧರು ಶನಿವಾರ ಹುತಾತ್ಮರಾಗಿದ್ದಾರೆ. ಆದಾಗ್ಯೂ, ರಫಾದಲ್ಲಿ ಹಾಗೂ ಅದರ ಸುತ್ತಲೂ ದಾಳಿ ಮುಂದುವರಿದಿದೆ. 19 ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ರಫಾದ ಪೂರ್ವ ಭಾಗದಲ್ಲಿರುವ ಟೆಲ್ ಅಲ್–ಸುಲ್ತಾನ ಪ್ರದೇಶದಲ್ಲಿ ವಾರದಿಂದಲೂ ಆಕ್ರಮಣ ನಡೆಸುತ್ತಿರುವ ಇಸ್ರೇಲ್ನ ಶಸ್ತ್ರಸಜ್ಜಿತ ಯೋಧರ ಮೇಲೆ ಹಮಾಸ್ ಬಂಡುಕೋರರು ದಾಳಿ ಮಾಡಿದ್ದಾರೆ. ಕೂಡಲೇ ಇಸ್ರೇಲ್ ಸೇನೆ ಪ್ರತಿದಾಳಿ ನಡೆಸಿದೆ.

ಕದನ ವಿರಾಮ ಘೋಷಿಸುವಂತೆ ಅಂತರರಾಷ್ಟ್ರೀಯ ಸಮುದಾಯದಿಂದ ಒತ್ತಡವಿದ್ದರೂ, ಹಮಾಸ್ ಮತ್ತು ಇಸ್ರೇಲ್ ನಡುವೆ ಕಳೆದ ಎಂಟು ತಿಂಗಳಿಂದ ಯುದ್ಧ ಮುಂದುವರಿದಿದೆ.

ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಕಳೆದ ವರ್ಷ ಅಕ್ಟೋಬರ್ 7ರಂದು ದಾಳಿ ನಡೆಸಿದ್ದರು. ಆ ವೇಳೆ ಸಾವಿರಾರು ಮಂದಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಇಸ್ರೇಲ್ ಪ್ರತಿದಾಳಿ ನಡೆಸುತ್ತಿದೆ.

ಈ ಯುದ್ಧದಿಂದಾಗಿ ಇದುವರೆಗೆ 37,296 ಮಂದಿ ಮೃತಪಟ್ಟಿದ್ದಾರೆ. 85,197 ನಾಗರಿಕರು ಗಾಯಗೊಂಡಿದ್ದಾರೆ ಎಂದು ಹಮಾಸ್ ಆಡಳಿತವಿರುವ ಗಾಜಾ ಆರೋಗ್ಯ ಇಲಾಖೆ ಶನಿವಾರ ಹೇಳಿಕೆ ಬಿಡುಗಡೆ ಮಾಡಿತ್ತು.
.Israel–Hamas war: ಯುದ್ಧದಿಂದ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 37,296.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.