ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠ್ಮಂಡುವಿನ ಪಶುಪತಿನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಜೈ ಶಂಕರ್

Published 5 ಜನವರಿ 2024, 6:27 IST
Last Updated 5 ಜನವರಿ 2024, 6:27 IST
ಅಕ್ಷರ ಗಾತ್ರ

ಕಠ್ಮಂಡು: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಶುಕ್ರವಾರ ಇಲ್ಲಿನ ಪ್ರಸಿದ್ಧ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಿ ಉಭಯ ದೇಶಗಳ ಜನರ ಕಲ್ಯಾಣ ಮತ್ತು ಭಾರತ-ನೇಪಾಳ ಬಾಂಧವ್ಯಕ್ಕಾಗಿ ಪ್ರಾರ್ಥಿನೆ ಸಲ್ಲಿಸಿದರು.

2024ರಲ್ಲಿ ತಮ್ಮ ಮೊದಲ ವಿದೆಶಿ ಭೇಟಿಯಲ್ಲಿ ಜೈಶಂಕರ್ ಗುರುವಾರ ನೇಪಾಳಕ್ಕೆ ಆಗಮಿಸಿದ್ದರು.

ಎರಡನೇ ದಿನದಂದು ದೇಶದಲ್ಲಿ ತಮ್ಮ ನಿಗದಿತ ಕಾರ್ಯಕ್ರಮಗಳಿಗೆ ತೆರಳುವ ಮೊದಲು ಅವರು ಮುಂಜಾನೆ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಿದರು.

‘ಇಂದು ಬೆಳಿಗ್ಗೆ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೇನೆ. ನಮ್ಮ ಎರಡು ದೇಶಗಳ ಕಲ್ಯಾಣ ಮತ್ತು ಭಾರತ-ನೇಪಾಳ ಬಾಂಧವ್ಯಕ್ಕಾಗಿ ಪ್ರಾರ್ಥಿಸಿದೆ’ಎಂದು ಜೈಶಂಕರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಠ್ಮಂಡುವಿನ ಪೂರ್ವ ಹೊರವಲಯದಲ್ಲಿರುವ ಪವಿತ್ರ ನದಿ ಬಾಗ್ಮತಿ ದಡದಲ್ಲಿರುವ ಪಶುಪತಿನಾಥ ದೇವಾಲಯ, ನೇಪಾಳದ ಅತ್ಯಂತ ಪೂಜ್ಯ ಹಿಂದೂ ದೇವಾಲಯವಾಗಿದೆ. ಇದು ಪ್ರಮುಖ ಪ್ರವಾಸಿ ತಾಣವಲ್ಲದೆ ಪ್ರಪಂಚದಾದ್ಯಂತ ಹಿಂದೂ ಯಾತ್ರಿಕರನ್ನು ಆಕರ್ಷಿಸುತ್ತದೆ.

ಶತಮಾನಗಳಷ್ಟು ಹಳೆಯದಾದ ಈ ದೇವಾಲಯದಲ್ಲಿ ಹಿಂದೂ ದೇವರಾದ ಶಿವನನ್ನು ಪ್ರಾಣಿಗಳ ರಕ್ಷಕನಾದ ಪಶುಪತಿಯ ಅವತಾರದಲ್ಲಿ ಪೂಜಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT