ವಾಷಿಂಗ್ಟನ್: ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಮೊದಲ ಬಾರಿಗೆನೆಪ್ಚೂನ್ ಗ್ರಹದ ಚಿತ್ರವನ್ನು ಅತ್ಯಂತ ಸ್ಪಷ್ಟವಾಗಿ ಸೆರೆ ಹಿಡಿದಿದೆ.

ಮೂರು ದಶಕಗಳ ನಂತರದೂರದ ಈ ಗ್ರಹದ ಸ್ಪಷ್ಟ ನೋಟ ಜೇಮ್ಸ್ ವೆಬ್ ದೂರದರ್ಶಕದಲ್ಲಿ ಸೆರೆಯಾಗಿದೆ. ಗ್ರಹದ ಸುತ್ತಲಿನ ಉಂಗುರಗಳ ಪ್ರಕಾಶಮಾನದ ನೋಟಈಚಿತ್ರದ ವಿಶೇಷತೆಯಾಗಿದೆ.

ನಾಸಾದ ವಾಯೇಜರ್ 2 ಬಾಹ್ಯಾಕಾಶ ನೌಕೆಯು 1989ರಲ್ಲಿನೆಪ್ಚೂನ್ ಗ್ರಹವನ್ನು ಮೊದಲ ಬಾರಿಗೆ ಪತ್ತೆ ಹಚ್ಚಿತ್ತು. ಆಗ ನೆಪ್ಚೂನ್ ಗ್ರಹದ ಸುತ್ತಲಿನ ವಿಶಿಷ್ಟವಾದ ಉಂಗುರಗಳು ಕಂಡುಬಂದಿರಲಿಲ್ಲ ಎಂದು ನಾಸಾ ಹೇಳಿದೆ.

ಜೇಮ್ಸ್ ವೆಬ್ ಸೆರೆ ಹಿಡಿದ ಚಿತ್ರದಲ್ಲಿ ನೆಪ್ಚೂನ್ ಗ್ರಹವುಪ್ರಕಾಶಮಾನವಾಗಿದ್ದು, ಕಿರಿದಾದ ಉಂಗುರಗಳ ಜೊತೆಗೆ ಮಸುಕಾದ ಧೂಳಿನ ಪಟ್ಟಿ ಗೋಚರವಾಗಿದೆ. ‘ಈ ಮಸುಕಾದ, ಧೂಳಿನ ಉಂಗುರಗಳನ್ನು ಕೊನೆಯದಾಗಿ ನೋಡಿ ಮೂರು ದಶಕಗಳಾದವು. ಇದೇ ಮೊದಲ ಬಾರಿಗೆ ನೆಪ್ಚೂನ್ ಗ್ರಹವನ್ನು ಕಡುಗೆಂಪಿನಲ್ಲಿ ನೋಡುತ್ತಿದ್ದೇವೆ’ ಎಂದು ನೆಪ್ಚೂನ್ ಕುರಿತು ಅಧ್ಯನ ನಡೆಸಿರುವ ಪರಿಣತ ಮತ್ತು ಅಂತರ್‌ಶಿಸ್ತೀಯ ವಿಜ್ಞಾನಿಹೈಡಿ ಹ್ಯಾಮೆಲ್ ಹೇಳಿರುವುದಾಗಿ ಜೇಮ್ಸ್ ವೆಬ್‌ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.