ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಪಾನ್‌ನ ಇಶಿಕಾವಾ ಪ್ರಾಂತ್ಯದಲ್ಲಿ 5.9 ತೀವ್ರತೆಯ ಭೂಕಂಪ

Published 3 ಜೂನ್ 2024, 1:53 IST
Last Updated 3 ಜೂನ್ 2024, 1:53 IST
ಅಕ್ಷರ ಗಾತ್ರ

ಟೋಕಿಯೊ(ಜಪಾನ್): ಜಪಾನ್‌ನ ಇಶಿಕಾವಾ ಪ್ರಾಂತ್ಯದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ಹೇಳಿದೆ. ಯಾವುದೇ ಸುನಾಮಿ ಎಚ್ಚರಿಕೆ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎನ್‌ಎಚ್‌ಕೆ ವರದಿ ಮಾಡಿದೆ.

ಸೋಮವಾರ ಬೆಳಿಗ್ಗೆ 6.31ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಭೂಮಿಯಿಂದ 10 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ.

ಇಶಿಕಾವಾ ಪ್ರಾಂತ್ಯದ ವಜಿಮಾ ಮತ್ತು ಸುಜು ನಗರಗಳಲ್ಲಿ ಕಂಪನದ ಅನುಭವವಾಗಿದ್ದು, ಕಂಪನದ ತೀವ್ರತೆ 5ರಷ್ಟು ದಾಖಲಾಗಿದೆ.

ನೋಟೊ ನಗರದಲ್ಲಿ 5ಕ್ಕೂ ಕಡಿಮೆ ತೀವ್ರತೆಯ ಕಂಪನದ ಅನುಭವವಾಗಿದೆ. ನಾನವ್ ಮತ್ತು ಅನಾಮಿಜು ನಗರಗಳಲ್ಲಿ ನೀಗಟ ಪ್ರಾಂತ್ಯದ ಕೆಲವೆಡೆ 4ಕ್ಕೂ ಕಡಿಮೆ ತೀವ್ರತೆಯ ಭೂಕಂಪ ಸಂಭವಿಸಿದೆ.

ಭೂಕಂಪನದ ನಂತರ ಪೂರ್ವ ರೈಲ್ವೆಯ ಹೊಕುರಿಕು ಶಿಕಾನ್‌ಸೆನ್ ಮತ್ತು ಜೋತ್ಸು ಶಿಕಾನ್‌ಸೆನ್ ನಡುವಿನ ಬುಲೆಟ್ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT