ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ ಚಂದ್ರ ಯೋಜನೆ: ತಲೆಕೆಳಗಾದ ಲ್ಯಾಂಡರ್‌

Published 25 ಜನವರಿ 2024, 13:55 IST
Last Updated 25 ಜನವರಿ 2024, 13:55 IST
ಅಕ್ಷರ ಗಾತ್ರ

ಟೋಕಿಯೊ: ಜಪಾನ್‌ ಕಳುಹಿಸಿದ್ದ ಲ್ಯಾಂಡರ್‌ ಪೂರ್ವ ನಿಗದಿತ ಜಾಗದಲ್ಲಿಯೇ ಚಂದ್ರನನ್ನು ಸ್ಪರ್ಶಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಅದು ಕೊನೆ ಹಂತದಲ್ಲಿ ತಲೆಕೆಳಗಾಗಿದೆ ಎಂದು ಜಪಾನ್‌ ಬಾಹ್ಯಾಕಾಶ ಸಂಸ್ಥೆ ಗುರುವಾರ ತಿಳಿಸಿದೆ. ಚಂದ್ರನ ಮೇಲ್ಮೈ ಪ್ರವೇಶಿಸುವ ತನ್ನ ಮೊದಲ ಯೋಜನೆಯಡಿ ಲ್ಯಾಂಡರ್‌ ಅನ್ನು ಅದು ಕಳುಹಿಸಿತ್ತು.

ಚಂದ್ರನ ಅಧ್ಯಯನಕ್ಕಾಗಿ ಜಪಾನ್‌ ಕಳುಹಿಸಿರುವ ‘ಸ್ಲಿಮ್‌’ ಲ್ಯಾಂಡರ್‌ ಚಂದ್ರನನ್ನು ಶನಿವಾರ ಮುಂಜಾನೆ ಸ್ಪರ್ಶಿಸಿತು. ಆ ಮೂಲಕ ಚಂದ್ರನನ್ನು ತಲುಪಿದ ಐದನೇ ದೇಶ ಎಂಬ ಕೀರ್ತಿಗೆ ಅದು ಭಾಜನವಾಯಿತು. 

ಲ್ಯಾಂಡರ್‌ ಇಳಿಯುವ ಸಂದರ್ಭದಲ್ಲಿ ಸೌರ ಬ್ಯಾಟರಿಯಲ್ಲಿ ಕಂಡು ಬಂದ ತೊಂದರೆಯಿಂದಾಗಿ, ಅದು ನಿಗದಿತ ವಲಯದಲ್ಲಿಯೇ ಇಳಿದಿದೆಯೇ ಎಂಬುದನ್ನು ಖಚಿತವಾಗಿ ಲೆಕ್ಕ ಹಾಕವುದು ಆರಂಭದಲ್ಲಿ ಕಷ್ಟವಾಯಿತು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT