ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಮ್‌ಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ್ದ ವೈದ್ಯನ ಬಗ್ಗೆ ಇಲ್ಲಿದೆ ಮಾಹಿತಿ

Last Updated 25 ಏಪ್ರಿಲ್ 2020, 16:25 IST
ಅಕ್ಷರ ಗಾತ್ರ

ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್‌ ಜಾಂಗ್‌ ಉನ್‌ ಅವರು ಶಸ್ತ್ರಚಿಕಿತ್ಸೆ ನಂತರ ಗಂಭೀರಗೊಂಡಿದ್ದಾರೆ ಎಂಬ ಸುದ್ದಿ ಬಹಿರಂಗವಾದ ಕೂಡಲೇ, ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದ ಶಸ್ತ್ರಚಿಕಿತ್ಸಕರ ಕುರಿತು ಕುತೂಹಲ ಮೂಡಿತ್ತು. ಹೀಗಿರುವಾಗಲೇ ವೈದ್ಯನ ಕುರಿತು ದಕ್ಷಿಣ ಕೊರಿಯಾದ ಡೈಲಿ ಎನ್‌ಕೆ ಮಾಹಿತಿ ಕಲೆ ಹಾಕಿದೆ.

ಕಿಮ್‌ ಜಾಂಗ್‌ ಉನ್‌ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯ ರಾಷ್ಟ್ರ ರಾಜಧಾನಿ ಪ್ಯೊಂಗ್ಯಾಂಗ್‌ನ ಕಿಮ್‌ ಮನ್‌ ಯು ಆಸ್ಪತ್ರೆಯವರು.

ಕಿಮ್‌ ಮನ್‌ ಯು ಅತ್ಯಾಧುನಿಕ ಹೃದ್ರೋಗ ಆಸ್ಪತ್ರೆಯಾಗಿದ್ದು, ನುರಿತ ಪರಿಣತ ವೈದ್ಯರು, ಶಸ್ತ್ರಚಿಕಿತ್ಸಕರು ಇಲ್ಲಿ ಕೆಲಸ ಮಾಡುತ್ತಾರೆ. ಕಿಮ್‌ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದ ಶಸ್ತ್ರಚಿಕಿತ್ಸಕ ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳ ಚಿಕಿತ್ಸೆಯಲ್ಲಿ ಪರಿಣತರು. ಕಿಮ್‌ ಜಾಂಗ್‌ ಉನ್‌ ಅವರ ಹೃದಯ ಸಮಸ್ಯೆಗೆ ಚಿಕಿತ್ಸೆ ನೀಡಲು ಅವರನ್ನು ನೇಮಿಸಿದ ನಂತರ ಅವರನ್ನು ಹೊರ ದೇಶಗಳಿಗೆ ಕಳುಹಿಸಿ ಹೆಚ್ಚಿನ ತರಬೇತಿ ಕೊಡಿಸಲಾಗಿತ್ತು ಎಂದು ಹೇಳಲಾಗಿದೆ.

‘ಜರ್ಮನಿಯಲ್ಲಿ ಅವರಿಗೆ ಹೆಚ್ಚಿನ ತರಬೇತಿ ನೀಡಲು ಆಯ್ಕೆ ಮಾಡಿಕೊಳ್ಳುವುದಕ್ಕೂ ಮೊದಲು ಅವರು ಕಿಮ್‌ ಮನ್‌ ಯು ಆಸ್ಪತ್ರೆಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು,’ ಎಂದು ಮೂಲಗಳ ಮಾಹಿತಿ ಉಲ್ಲೇಖಿಸಿ ಡೈಲಿ ಎನ್‌ಕೆ ವರದಿ ಮಾಡಿದೆ.

ಹೃದ್ರೋಗ ಚಿಕಿತ್ಸೆಯಲ್ಲಿ ಹೊಂದಿದ್ದ ಆಳವಾದ ಜ್ಞಾನ, ಜರ್ಮನಿಯಲ್ಲಿ ಹೆಚ್ಚಿನ ತರಬೇತಿ ಪಡೆದಿದ್ದ ವೈದ್ಯನಿಗೆ ಕಿಮ್‌ ಹೃದಯ ಶಸ್ತ್ರ ಚಿಕಿತ್ಸೆ ಅಸಾಧಾರಣವೇನೂ ಆಗಿರಲಿಲ್ಲ ಎಂದೂ ಮೂಲಗಳು ತಿಳಿಸಿವೆ.

ಆ ವೈದ್ಯನನ್ನು ಕಿಮ್‌ ಕುಟುಂಬ ಅತ್ಯಂತ ವಿಶ್ವಾಸದಿಂದ ಕಾಣುತ್ತದೆ. ಅವರಿಗೆ ಭದ್ರತೆಯನ್ನೂ ಒದಗಿಸಲಾಗಿದ್ದು, ಅಂಗರಕ್ಷಕರೊಂದಿಗೆ ಅವರು ಓಡಾಡುತ್ತಾರೆ ಎಂದು ತಿಳಿದು ಬಂದಿದೆ.

‘ಅವರು ತಿಂಗಳಿಗೆ ಒಮ್ಮೆ ಕಿಮ್‌ ಮನ್‌ ಯೂ ಆಸ್ಪತ್ರೆಗೆ ಹೋಗುತ್ತಾರೆ. ವೈದ್ಯಕೀಯ ಪ್ರಯೋಗಗಳನ್ನು ನಡೆಸಲು ಅವರೊಗೆ ಸದಾ ಅವಕಾಶ ನೀಡಲಾಗುತ್ತದೆ. ಅದೇ ಹೊತ್ತಿನಲ್ಲೇ ಕಿಮ್‌ ಚಿಕಿತ್ಸೆಗೆ ಅವರು ಸದಾ ಸಜ್ಜಾಗಿರಬೇಕಾಗುತ್ತದೆ,’ ಎನ್ನಲಾಗಿದೆ.

ಹ್ಯಾಂಗ್‌ ಸ್ಯಾನ್‌ ಆಸ್ಪತ್ರೆಯಲ್ಲಿ ಸದ್ಯ ಕಿಮ್‌ ಅವರ ಶುಶ್ರೂಷೆಯಲ್ಲಿ ತೊಡಗಿರುವ ವೈದ್ಯರೂ ಪರಿಣತರಾಗಿದ್ದು, ಅವರೆಲ್ಲರೂ ಜರ್ಮನಿಯಲ್ಲಿ ತರಬೇತಿ ಪಡೆದು ಬಂದವರಾಗಿದ್ದಾರೆ. ಅವರೆಲ್ಲರೂ ಹೃದಯ ರಕ್ತನಾಳ ಚಿಕಿತ್ಸೆಯಲ್ಲಿ ಪರಿಣತರಾಗಿದ್ದು, ಉಸಿರಾಟ ವ್ಯವಸ್ಥೆ ಸೇರಿದಂತೆ ಇತರ ಬೇರೆ ಬೇರೆ ವಿಭಾಗಳಲ್ಲೂ ಪರಿಣತಿ ಪಡೆದವರಾಗಿದ್ದಾರೆ ಎಂದು ಮೂಲಗಳ ಮಾಹಿತಿಯೊಂದಿಗೆ ಡೈಲಿ ಎನ್‌ಕೆ ವರದಿ ಮಾಡಿದೆ.

(ದಕ್ಷಿಣ ಕೊರಿಯಾದವೆಬ್‌ ಮಾಧ್ಯಮವಾಗಿರುವ ‘ಡೈಲಿ ಎನ್‌ಕೆ’ ಉತ್ತರ ಕೊರಿಯಾದ ನಾಯಕಕಿಮ್‌ ಜಾಂಗ್‌ ಉನ್‌ ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಮೊದಲ ಬಾರಿಗೆ ವರದಿ ಮಾಡಿತ್ತು.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT